Udyogatana
ಉದ್ಯೋಗ

ಪಿಯುಸಿ, ಪದವೀಧರರಿಗೆ 8,570 ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಸ್ಟೇಷನ್ ಮಾಸ್ಟರ್, ಟಿಕೆಟ್ ಸೂಪರ್ ವೈಸರ್ ಹುದ್ದೆಗಳು

ಸವಿತಾ ಎಂ.,21 Oct 2025, 07:18 pm IST

ಪಿಯುಸಿ ಮತ್ತು ಪದವೀಧರರಿಂದ ರೈಲ್ವೇ ಇಲಾಖೆಯ ನಾನ್ ಟೆಕ್ನಿಕ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಟಿಪಿಸಿ) 8,570 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ವಿವರ ಇಲ್ಲಿದೆ...

ಪಿಯುಸಿ, ಪದವೀಧರರಿಗೆ 8,570 ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಸ್ಟೇಷನ್ ಮಾಸ್ಟರ್, ಟಿಕೆಟ್ ಸೂಪರ್ ವೈಸರ್ ಹುದ್ದೆಗಳು

Railway NTPC Recruitment 2025: ರೈಲ್ವೇ ನೇಮಕಾತಿ ಮಂಡಳಿಯು (Railway Recruitment Board- RRB) ಮತ್ತೊಂದು ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ರೈಲ್ವೇ ಇಲಾಖೆಯಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಹತೆಯ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (Non-Technical Popular Categories- NTPC) ಎಂದೇ ಕರೆಯಲಾಗುವ ಈ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಪದವಿ ಮತ್ತು ಪಿಯುಸಿ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.

ಯಾವ ಹುದ್ದೆಗಳು? ಎಷ್ಟೆಷ್ಟು?

ಎನ್‌ಟಿಪಿಸಿಯಲ್ಲಿ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಹತೆಯ ಒಟ್ಟು 8,570 ಹುದ್ದೆಗಳಿವೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಹೀಗಿದೆ:

  • ಪದವಿ ವಿದ್ಯಾರ್ಹತೆ ಹುದ್ದೆಗಳು: 5,800

ಚೀಫ್ ಕಮರ್ಷಿಯಲ್ ಕಂ ಟಿಕೆಟ್ ಸೂಪರ್ ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೆöÊನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಂ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್

  • ಪದವಿ ಪೂರ್ವ ವಿದ್ಯಾರ್ಹತೆ ಹುದ್ದೆಗಳು: 3,058

ಟ್ರಾಫಿಕ್ ಅಸಿಸ್ಟೆಂಟ್, ಕಮರ್ಷಿಯಲ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಂ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್, ಟ್ರೇನ್ಸ್ ಕ್ಲರ್ಕ್

ವಯೋಮಿತಿ ಎಷ್ಟು?

ಪದವಿ ವಿದ್ಯಾರ್ಹತೆಯ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ಹಾಗೂ ಗರಿಷ್ಠ 33 ವರ್ಷದ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

ಪದವಿ ಪೂರ್ವ ವಿದ್ಯಾರ್ಹತೆಯ ಹುದ್ದೆಗಳಿಗೆ 18 ರಿಂದ 30 ವರ್ಷ ವಯೋಮಾನದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಯ ಕೊನೆಯ ದಿನಕ್ಕೆ ಅನ್ವಯಿಸುವಂತೆ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವೇತನ ಶ್ರೇಣಿ ಎಷ್ಟು?

ಪದವಿ ವಿದ್ಯಾರ್ಹತೆಯ ಚೀಫ್ ಕಮರ್ಷಿಯಲ್ ಕಂ ಟಿಕೆಟ್ ಸೂಪರ್‌ವೈಸರ್, ಸ್ಟೇಷನ್ ಮಾಸ್ಟರ್ ಹುದ್ದೆಗೆ 6ನೇ ಹಂತದ ವೇತನ ಶ್ರೇಣಿಯಿರಲಿದ್ದು, 35,400 ರೂ. ಆರಂಭಿಕ ವೇತನವಾಗಿರುತ್ತದೆ.

ಗೂಡ್ಸ್ ಟ್ರೇನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಕಂ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ 5ನೇ ಹಂತದ ವೇತನ ಶ್ರೇಣಿಯಲ್ಲಿ 29,200 ರೂ. ಆರಂಭಿಕ ವೇತನವಾಗಿರುತ್ತದೆ. ಆದರೆ, ಇತರ ಭತ್ಯೆಗಳು ಅನ್ವಯವಾಗಲಿವೆ.

ಪದವಿ ಪೂರ್ವ ವಿದ್ಯಾರ್ಹತೆಯ ಟ್ರಾಫಿಕ್ ಅಸಿಸ್ಟೆಂಟ್‌ಗೆ 25,500 ರೂ., ಕಮರ್ಷಿಯಲ್ ಟಿಕೆಟ್ ಕ್ಲರ್ಕ್'ಗೆ 21,700 ರೂ., ಅಕೌಂಟ್ಸ್ ಕ್ಲರ್ಕ್ ಕಂ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್, ಟ್ರೇನ್ಸ್ ಕ್ಲರ್ಕ್'ಗಳಿಗೆ 19,900 ರೂ. ಆರಂಭಿಕ ವೇತನವಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳಿಗೆ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಪದವಿ ಪೂರ್ವ ವಿಭಾಗಕ್ಕೆ ಒಂದು ಹಂತದ ಹಾಗೂ ಪದವಿ ವಿದ್ಯಾರ್ಹತೆಯ ಉನ್ನತ ಹಂತದ ಹುದ್ದೆಗಳಿಗೆ ಎರಡು ಹಂತದ ಪರೀಕ್ಷೆಗಳು ಇರಲಿವೆ.

ಅರ್ಜಿಯಲ್ಲಿ ಸಲ್ಲಿಸಲಾಗಿರುವ ಮಾಹಿತಿ ಆಧಾರದಲ್ಲಿಯೇ ಅಭ್ಯರ್ಥಿಯ ಅರ್ಹತೆ ನಿರ್ಧಾರವಾಗಲಿದೆ. ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣಪತ್ರದಲ್ಲಿ ಇರುವಂತೆ ತನ್ನ ಹೆಸರು, ಪಾಲಕರ ಹೆಸರು ಹಾಗೂ ಜನ್ಮದಿನಾಂಕವನ್ನು ನಮೂದಿಸಬೇಕು.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ

ಪದವೀಧರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ನವೆಂಬರ್ 20 ಕೊನೆಯ ದಿನವಾಗಿದೆ. ಪದವಿ ಪೂರ್ವ (ಪಿಯುಸಿ) ಅರ್ಹತೆಯುಳ್ಳ ಹುದ್ದೆಗಳಿಗೆ ನವೆಂಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರಲಿದೆ.

ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆ ಲಿಂಕ್: rrbbnc.gov.in

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#RailwayRecruitment#NTPCJobs#RRBVacancy#GovtJobsIndia#StationMaster#TicketSupervisor#PUCJobs#GraduateJobs#IndianRailways#JobAlert2025#ರೈಲ್ವೇನೇಮಕಾತಿ#ಪಿಯುಸಿಹುದ್ದೆಗಳು#ಸ್ಟೇಷನ್‌ಮಾಸ್ಟರ್#ಟಿಕೆಟ್‌ಸೂಪರ್‌ವೈಸರ್#ಸರ್ಕಾರಿಉದ್ಯೋಗ#ರೈಲ್ವೆಉದ್ಯೋಗ#ಭಾರತೀಯರೈಲ್ವೇ#ಆರ್‌ಆರ್‌ಬಿನೇಮಕಾತಿ
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...