Udyogatana

ನಮ್ಮ ಬಗ್ಗೆ

ನಿಮ್ಮ ಕನಸಿನ ಉದ್ಯೋಗ ಹುಟುಕಾಟ ಹಾಗೂ ಶೈಕ್ಷಣಿಕ ಹಾದಿಗೆ ಉಪಯುಕ್ತವಾಗುವಂತಹ ಮಾಹಿತಿ, ಮಾರ್ಗದರ್ಶನ, ಸಲಹೆಗಳನ್ನು ನೀಡುವ ಸದುದ್ದೇಶದಿಂದ ಪರಿಣಿತರ ತಂಡವು udyogatana.in ಜಾಲತಾಣವನ್ನು ಆರಂಭಿಸಿದೆ.

ವಿವಿಧ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿನ ಅತ್ಯುತ್ತಮ ಉದ್ಯೋಗಗಳು, ಶೈಕ್ಷಣಿಕ ರಂಗದ ಆಗು-ಹೋಗುಗಳು, ವಿವಿಧ ಪರೀಕ್ಷಾ ಫಲಿತಾಂಶಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ನೌಕರರ ಕುರಿತ ತಾಜಾ ಅಪ್ಡೇಟ್‌ಗಳನ್ನು ಒದಗಿಸುವುದು ಈ ಜಾಲತಾಣದ ಉದ್ದೇಶವಾಗಿದೆ.

ಪ್ರಮುಖವಾಗಿ ಈ ಜಾಲತಾಣದಲ್ಲಿ ಬ್ಯಾಂಕಿಂಗ್, ರಕ್ಷಣಾ ಮತ್ತು ಪೊಲೀಸ್, ರೈಲ್ವೆ, ಸಾಮಾನ್ಯ ಆಡಳಿತ, ಟೆಲಿಕಾಂ, ಬೋಧನೆ ಮತ್ತು ಅಧ್ಯಾಪಕರು, ಸಾರಿಗೆ ಮತ್ತು ಸಂವಹನ, ವಿವಿಧ ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿನ ಇತ್ತೀಚಿನ ಉದ್ಯೋಗ ಮಾಹಿತಿಯನ್ನು ಕಾಣಬಹುದು.

ಇಲ್ಲಿ ಪ್ರಕಟಿಸಲಾದ ಎಲ್ಲಾ ಮಾಹಿತಿಯೂ ನಂಬಲರ್ಹ ಮೂಲಗಳಿಂದ ಸಂಗ್ರಹಿಸಲಾಗಿದ್ದು; ಅದಕ್ಕೆ ಸಂಬಂಧಿಸಿದ ಲಿಂಕ್, ಅಧಿಸೂಚನೆಗಳನ್ನು ಆಯಾ ಲೇಖನಗಳಲ್ಲಿಯೇ ನೀಡಲಾಗಿರುತ್ತದೆ. ಆ ಮೂಲಕ ನೀವು ಕೂಡಾ ಆ ಮಾಹಿತಿಯ ಮೂಲವನ್ನು ಪರಾಮರ್ಶಿಸಬಹುದಾಗಿದೆ.

ಯಾವುದೇ ಪ್ರಶ್ನೆಗಳಿಗೆ ಇಲ್ಲಿ ಸಂಪರ್ಕಿಸಿ: udyogatana@gmail.com