ಹಕ್ಕು ನಿರಾಕರಣೆ
ನಮಸ್ಕಾರ ಕರ್ನಾಟಕ...
udyogatana.in ವೆಬ್‌ಸೈಟ್ ಸಂಪೂರ್ಣ ವಿಶ್ವಾಸಾರ್ಹ ಹಾಗೂ ಜವಾಬ್ದಾರಿಯುತವಾದ ಮಾಧ್ಯಮವಾಗಿದೆ.
ಇದು ನಮ್ಮೆಲ್ಲ ಓದುಗರಿಗೆ ನಿಖರ, ಅಧಿಕೃತ ಹಾಗೂ ಪ್ರಾಮಾಣೀಕೃತ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮಾಹಿತಿ ಜಾಲತಾಣವಾಗಿದೆ.
ಇಲ್ಲಿ ಉದ್ಯೋಗ ಮಾಹಿತಿ, ವಿದ್ಯಾರ್ಥಿವೇತನ, ಕೇಂದ್ರ-ರಾಜ್ಯ ಸರ್ಕಾರಿ ಯೋಜನೆಗಳು, ಪ್ರವೇಶ ಪರೀಕ್ಷೆಗಳು, ನೇಮಕಾತಿ ಅಧಿಸೂಚನೆಗಳು ಹಾಗೂ ಸಾರ್ವಜನಿಕ ಉಪಯುಕ್ತ ಮಾಹಿತಿಗಳ ಕುರಿತು ತ್ವರಿತ ಮಾಹಿತಿ ಹಂಚಲಾಗುತ್ತದೆ.
ಉದ್ಯೋಗ ಮಾಹಿತಿ ಜಾಲತಾಣವು ಶೇ.100ರಷ್ಟು ನಿಖರ ಮಾಹಿತಿಯನ್ನು ಮಾತ್ರ ಪ್ರಕಟಿಸುವ ನಿಷ್ಠೆಯನ್ನು ನಾವು ಕಟ್ಟಿನಿಟ್ಟಾಗಿ ಪಾಲಿಸುತ್ತೇವೆ.
ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಪ್ರತಿ ಮಾಹಿತಿ, ಸುದ್ದಿ, ಅಧಿಸೂಚನೆ, ಅರ್ಜಿ ವಿವರಗಳೆಲ್ಲವೂ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕೃತ ಜಾಲತಾಣಗಳು, ಮುದ್ರಣ ಮಾಧ್ಯಮಗಳು, ಪ್ರಕಟಣೆಗಳು ಹಾಗೂ ನಂಬಲರ್ಹ ಮೂಲಗಳಿಂದ ಸಂಗ್ರಹಿಸಲ್ಪಟಿರುತ್ತವೆ.
ಇಲ್ಲಿ ಬಳಸಿದ ಯಾವುದೇ ಸುದ್ದಿಯಾಗಲಿ ಅಥವಾ ಮಾಹಿತಿಯಾಗಲಿ ಖಚಿತ ಪುರಾವೆಗಳಿಲ್ಲದೇ ಪ್ರಕಟಿಸುವುದಿಲ್ಲ ಎಂಬುವುದು ನಮ್ಮ ತತ್ವ.
ಪ್ರತಿಯೊಂದು ಲೇಖನದಲ್ಲಿ ಸಂಬಂಧಿಸಿದ ಅಧಿಕೃತ ಲಿಂಕ್‌ಗಳು, ಅರ್ಜಿ ಸಲ್ಲಿಕೆಯ ಲಿಂಕ್‌ಗಳು, ಅಧಿಸೂಚನೆಯ ಪಿಡಿಎಫ್ ಅಥವಾ ಮೂಲ ಜಾಲತಾಣದ ಉಲ್ಲೇಖಗಳನ್ನು ನೀಡಲಾಗುತ್ತದೆ. ಇದರಿಂದ ಓದುಗರು ತಾವೇ ಮೂಲದ ಪ್ರಮಾಣಿಕತೆಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ನಮ್ಮ ಕಾರ್ಯನೀತಿಗಳು
- udyogatana.inನಲ್ಲಿ ನಿಖರ, ಅಧಿಕೃತ, ಪ್ರಮಾಣೀಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುತ್ತದೆ.
- ಯಾವುದೇ ರೀತಿಯ ತಪ್ಪು, ಅಪೂರ್ಣ ಅಥವಾ ಗೊಂದಲಮಯ ಮಾಹಿತಿಗೆ ಇಲ್ಲಿ ಅವಕಾಶವಿಲ್ಲ.
- ನಮ್ಮೆಲ್ಲ ಓದುಗರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಸರಳ ಕನ್ನಡದಲ್ಲಿ ಮಾಹಿತಿಯನ್ನು ತಲುಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ.
ಸ್ಪಷ್ಟನೆ
udyogatana.in ವೆಬ್‌ಸೈಟ್ ಯಾವುದೇ ಸರ್ಕಾರಿ ಇಲಾಖೆ ಅಥವಾ ಸರ್ಕಾರಿ ಅಧೀನದ ಸಂಸ್ಥೆಯೊಂದಿಗೆ ನೇರವಾದ ಸಂಬಂಧವನ್ನು ಹೊಂದಿರುವುದಿಲ್ಲ.
ಈ ತಾಣದಲ್ಲಿ ನೀಡಲಾಗುವ ಎಲ್ಲಾ ಮಾಹಿತಿಗಳು ವಿದ್ಯಾರ್ಥಿಗಳು, ಉದ್ಯೋಕಾಂಕ್ಷಿಗಳು ಹಾಗೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶಕ್ಕಾಗಿ ಮಾತ್ರ.
ನಾವು ವಿವಿಧ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಗಳಿಂದ ಸಂಗ್ರಹಿಸಿ, ಪರಿಶೀಲಿಸಿ ಪ್ರಕಟಿಸುತ್ತೇವೆ. ಆದ್ದರಿಂದ ಓದುಗರು ಕೂಡ ಅಧಿಕೃತ ಮೂಲವನ್ನು ಪರಿಶೀಲಿಸುವುದು ಉತ್ತಮ.
ಒಟ್ಟಾರೆ udyogatana.in ಮೂಲಕ ನಿಮಗೆ ತಲುಪುವ ಪ್ರತಿಯೊಂದು ಮಾಹಿತಿಯೂ ನಿಖರವಾಗಿರಲಿ, ಸುಲಭವಾಗಿರಲಿ ಹಾಗೂ ಜವಾಬ್ದಾರಿಯುತವಾಗಿರಲಿ ಎಂಬುವುದು ನಮ್ಮ ಪ್ರಮುಖ ಆಶಯ.
ಓದುಗರಿಗೆ ಸಂದೇಶ
ನಿಮಗೆ ಯಾವುದೇ ರೀತಿಯ ಅನುಮಾನಗಳಿದ್ದರೆ ಅಥವಾ ಹೆಚ್ಚಿನ ಸಲಹೆ ನೀಡಲು ಬಯಸಿದ್ದರೆ, ನೀವು ನಮಗೆ udyogatana@gmail.com ಮೂಲಕ ಸಂಪರ್ಕಿಸಬಹುದು.
ಧನ್ಯವಾದಗಳು..
