Udyogatana
ಉದ್ಯೋಗ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ | ಪದವೀಧರರಿಗೆ ಮ್ಯಾನೇಜರ್ ಹುದ್ದೆಗಳು

ಮಾಲತೇಶ್ ಮಾಳಮ್ಮನವರ್•14 Oct 2025, 01:09 pm IST•
•

ಸರ್ಕಾರಿ ವಲಯದ ಬ್ಯಾಂಕ್ ಆಫ್ ಬರೊಡಾದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಬ್ಯಾಂಕ್ ಆಫ್ ಬರೋಡಾ ನೇಮಕಾತಿ | ಪದವೀಧರರಿಗೆ ಮ್ಯಾನೇಜರ್ ಹುದ್ದೆಗಳು

Bank Of Baroda Recruitment 2025: ಪ್ರಮುಖ ಹಾಗೂ ಪ್ರತಿಷ್ಠಿತ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda) ಇದೀಗ ವಿವಿಧ ಹುದ್ದೆಗಳ ಭರ್ತಿಗಾಗಿ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಬ್ಯಾಂಕಿAಗ್ ವಲಯದಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: ‘ಗಗನ ಸಖಿ’ ಆಗಲು ಪಿಯುಸಿ ಪಾಸಾದರೆ ಸಾಕು | ಸಂಪೂರ್ಣ ಮಾಹಿತಿ ಇಲ್ಲಿದೆ...

ಹುದ್ದೆಗಳ ವಿವರ

ಬ್ಯಾಂಕ್ ಆಫ್ ಬರೋಡಾದಲ್ಲಿ ಒಟ್ಟಾರೆ 50ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಅರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಸೂಕ್ತ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್): 01 ಹುದ್ದೆ

01

ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)

25

ಚೀಫ್ ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)

02

ಸೀನಿಯರ್ ಮ್ಯಾನೇಜರ್ (C & IC ರಿಲೇಷನ್‌ಶಿಪ್ ಮ್ಯಾನೇಜರ್)

16

ಚೀಫ್ ಮ್ಯಾನೇಜರ್ (C & IC ರಿಲೇಷನ್‌ಶಿಪ್ ಮ್ಯಾನೇಜರ್)

06

ವಯೋಮಿತಿ ವಿವರ

ಮೇಲ್ಕಾಣಿಸಿದ ಪ್ರತಿಯೊಂದು ಹುದ್ದೆಗೂ ಒಂದೊAದು ರೀತಿಯ ವಯೋಮಿತಿಯನು ನಿಗದಿಪಡಿಸಲಾಗಿದ್ದು; ವಿವರ ಈ ಕೇಳಗಿನಂತಿದೆ:

ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)

25 ರಿಂದ 30 ವರ್ಷ

ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)

28 ರಿಂದ 35 ವರ್ಷ

ಚೀಫ್ ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)

32 ರಿಂದ 42 ವರ್ಷ

ಸೀನಿಯರ್ ಮ್ಯಾನೇಜರ್ (C & IC ರಿಲೇಷನ್‌ಶಿಪ್ ಮ್ಯಾನೇಜರ್)

28 ರಿಂದ 35 ವರ್ಷ

ಚೀಫ್ ಮ್ಯಾನೇಜರ್ (C & IC ರಿಲೇಷನ್‌ಶಿಪ್ ಮ್ಯಾನೇಜರ್)

32 ರಿಂದ 42 ವರ್ಷ

ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಗಳ ಅನ್ವಯ ವರ್ಗವಾರು ವಯೋಮಿತಿ ಸಡಿಲಿಕೆ ದೊರೆಯಲಿದೆ.

ಇದನ್ನೂ ಓದಿ: ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಗ್ರಾಮೀಣ ಡಾಕ್ ಸೇವಕ್ ಎಕ್ಸಿಕ್ಯೂಟಿವ್ ಹುದ್ದೆಗಳು

ವಿದ್ಯಾರ್ಹತೆ ಮತ್ತು ಅನುಭವ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ (Commerce), ಫೈನಾನ್ಸ್, ಅರ್ಥಶಾಸ್ತ್ರ (Economics) ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾಗಿರಬೇಕು. ಅಥವಾ CA, CMA, CS, CFA ಮುಂತಾದ ವೃತ್ತಿಪರ ಕೋರ್ಸ್'ಗಳನ್ನು ಪೂರ್ಣಗೊಳಿಸಿರಬೇಕು. ಹುದ್ದೆಗೆ ಅನುಗುಣವಾಗಿ ಕನಿಷ್ಠ 2 ರಿಂದ 8 ವರ್ಷಗಳ ಅನುಭವ ಅಗತ್ಯ.

ವೇತನ ಶ್ರೇಣಿ

ಬ್ಯಾಂಕ್ ಆಫ್ ಬರೋಡಾ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ಹುದ್ದೆಯ ಪ್ರಕಾರ ಮಾಸಿಕ ವೇತನ ₹64,820 ರಿಂದ ₹1,20,940ರ ವರೆಗೆ ನಿಗದಿಯಾಗಿದೆ. ಜೊತೆಗೆ ಇತರ ಬ್ಯಾಂಕ್ ಸೌಲಭ್ಯಗಳೂ ಅನ್ವಯವಾಗುತ್ತವೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಆನ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ (Interview) ಕರೆಯಲಾಗುತ್ತದೆ. ಅಂತಿಮವಾಗಿ ಫಲಿತಾಂಶದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಪಿಎಫ್ ನಿಯಮ ಸರಳ | ಇನ್ಮುಂದೆ ಗಾರ್ಡಿಯನ್‌ಷಿಪ್ ಸರ್ಟಿಫಿಕೇಟ್ ಬೇಕಿಲ್ಲ

ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ವಿವರ

ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ಅಗತ್ಯ ದಾಖಲೆಗಳು ಹಾಗೂ ಶುಲ್ಕ ಪಾವತಿ ವಿವರಗಳನ್ನು ಸರಿಯಾಗಿ ಸಲ್ಲಿಸಬೇಕು.

ಪ.ಜಾ, ಪ.ಪಂ, ಅಂಗವಿಕಲರು, ಮಹಿಳೆಯರು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹175 ಹಾಗೂ ಉಳಿದ ಎಲ್ಲ ಅಭ್ಯರ್ಥಿಗಳಿಗೆ ₹850 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.

ಮುಖ್ಯ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ

10 ಅಕ್ಟೋಬರ್ 2025

ಅರ್ಜಿ ಸಲ್ಲಿಕೆ ಕೊನೆ

30 ಅಕ್ಟೋಬರ್ 2025

ಶುಲ್ಕ ಪಾವತಿ ಕೊನೆ ದಿನಾಂಕ

30 ಅಕ್ಟೋಬರ್ 2025

ಅಧಿಸೂಚನೆ: Download

ಅರ್ಜಿ ಲಿಂಕ್: Apply Now

ಮಾಲತೇಶ್ ಮಾಳಮ್ಮನವರ್

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಬ್ಯಾಂಕ್’ಆಫ್‌ಬರೋಡಾ#ಉದ್ಯೋಗಅವಕಾಶ#ಬ್ಯಾಂಕುನೇಮಕಾತಿ#ಉದ್ಯೋಗಮಾಹಿತಿ#ಬ್ಯಾಂಕುಉದ್ಯೋಗ#BankOfBaroda#BOBRecruitment#BankJobs#GovernmentJobs#FinanceCareers#CreditAnalystJobs#BOBVacancy#JobAlert
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...