Udyogatana
ನೌಕರರ ಕಾರ್ನರ್

ಪಿಎಫ್ ನಿಯಮ ಸರಳ | ಇನ್ಮುಂದೆ ಗಾರ್ಡಿಯನ್‌ಷಿಪ್ ಸರ್ಟಿಫಿಕೇಟ್ ಬೇಕಿಲ್ಲ

ಸವಿತಾ ಎಂ.,11 Oct 2025, 07:50 pm IST

ಪಿಎಫ್ ನಿಯಮಗಳು ಮತ್ತಷ್ಟು ಸರಳವಾಗಿದ್ದು; ಇನ್ನು ಮುಂದೆ ಗಾರ್ಡಿಯನ್‌ಷಿಪ್ ಸರ್ಟಿಫಿಕೆಟ್ ಇಲ್ಲದೆಯೇ ಪಿಎಫ್ ಹಣವನ್ನು ತವರಿತವಾಗಿ ಪಡೆಯಬಹುದಾಗಿದೆ...

ಪಿಎಫ್ ನಿಯಮ ಸರಳ | ಇನ್ಮುಂದೆ ಗಾರ್ಡಿಯನ್‌ಷಿಪ್ ಸರ್ಟಿಫಿಕೇಟ್ ಬೇಕಿಲ್ಲ

EPFO PF Claim Simplified: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation – EPFO) ತನ್ನ ಸದಸ್ಯರ ಕುಟುಂಬಗಳಿಗೆ ನೆರವಾಗುವ ಹೊಸ ಹೆಜ್ಜೆಯೊಂದನ್ನು ಇರಿಸಿದೆ. ಇತ್ತೀಚೆಗೆ ಪ್ರಕಟಿಸಿದ ಅಧಿಸೂಚನೆಯ ಪ್ರಕಾರ ಪಿಎಫ್ ಖಾತೆದಾರರು ನಿಧನರಾದ ನಂತರ, ಅವರ ಕುಟುಂಬಕ್ಕೆ ಹಣ ಪಾವತಿಸುವ ವಿಧಾನವನ್ನು EPFO ತುಂಬಾ ಸರಳಗೊಳಿಸಿದೆ.

ಇನ್ಮುಂದೆ ಗಾರ್ಡಿಯನ್‌ಷಿಪ್ ಪ್ರಮಾಣಪತ್ರ ಬೇಕಾಗಿಲ್ಲ

ಹಿಂದಿನ ನಿಯಮಗಳ ಪ್ರಕಾರ, ಪಿಎಫ್ ಸದಸ್ಯರು ಸಾವಿಗೀಡಾದರೆ, ಅವರ ಮಕ್ಕಳಿಗೆ ಅಥವಾ ಪತ್ನಿಗೆ ಅಥವಾ ಪೋಷಕರಿಗೆ ಹಣ ಪಾವತಿಸಲು ಕೆಲವೊಂದು ಕಾನೂನು ದಾಖಲೆಗಳು ಕಡ್ಡಾಯವಾಗಿದ್ದವು. ಈ ಪೈಕಿ ಪ್ರಮುಖವಾಗಿ ‘ಗಾರ್ಡಿಯನ್‌ಷಿಪ್ ಪ್ರಮಾಣಪತ್ರ’ (Legal Guardian Certificate) ಅಂದರೆ, ಮೃತರ ಅಪ್ರಾಪ್ತ ಮಕ್ಕಳನ್ನು ನೋಡಿಕೊಳ್ಳುವ ಹಕ್ಕಿನ ಅಧಿಕೃತ ದಾಖಲಾತಿ ಬೇಕಾಗಿತ್ತು.

ಇದನ್ನು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ವಕೀಲರನ್ನು ಹಿಡಿದು ಕಾಯಬೇಕಿತ್ತು. ಈ ಬಗ್ಗೆ ಹಲವರ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಸ್ಪಂದಿಸಿದ EPFO ಈಗ, ಉದ್ಯೋಗಿಗಳ ಹಿತದೃಷ್ಠಿಯಿಂದ ಈ ನಿಯಮವನ್ನು ಬದಲಾಯಿಸಿದೆ.

ನೂತನ ನಿಯಮದ ಪ್ರಕಾರ EPFO ಸದಸ್ಯರು ಉದ್ಯೋಗದಲ್ಲಿರುವಾಗಲೇ ನಿಧನರಾದರೆ, ಪಿಎಫ್ ಖಾತೆಯಲ್ಲಿರುವ ಮೊತ್ತ, ಪಿಂಚಣಿ ಹಾಗೂ ಇನ್ಶುರೆನ್ಸ್ ಹಣವನ್ನು ಪತ್ನಿ, ಪೋಷಕರು ಮತ್ತು ಮಕ್ಕಳಿಗೆ ನೇರವಾಗಿ ಪಾವತಿಸಲಾಗುತ್ತದೆ.

ಅಪ್ರಾಪ್ತ ಮಕ್ಕಳ ಖಾತೆಗೆ ಹಣ ಜಮಾ

ಇನ್ನೂ 18 ವರ್ಷ ಪೂರೈಸಿಲ್ಲದ ಅಪ್ರಾಪ್ತ ಮಕ್ಕಳಿಗೆ ಹಣ ಪಾವತಿಸಲು, ಈ ಹಿಂದೆ ಕಡ್ಡಾಯವಾಗಿದ್ದ ಗಾರ್ಡಿಯನ್‌ಷಿಪ್ ಪ್ರಮಾಣಪತ್ರವನ್ನು ಇನ್ನು ಮುಂದೆ ನೀಡಬೇಕಾದ ಅಗತ್ಯವಿರುವುದಿಲ್ಲ.

Related image

ಮೃತ ಸದಸ್ಯರ ಮಕ್ಕಳ ಹೆಸರಿನಲ್ಲಿ ಇದ್ದ ಬ್ಯಾಂಕ್ ಖಾತೆಗೆ ನೇರವಾಗಿ ಪಿಎಫ್ ಹಣ ಜಮೆಯಾಗುತ್ತದೆ. ಪೋಷಕರು ಅಥವಾ ಕಾನೂನು ಪಾಲಕರು ಮಕ್ಕಳ ಖಾತೆಯನ್ನು ನಿರ್ವಹಿಸಬಹುದು, ಇದಕ್ಕಾಗಿ ಪ್ರತ್ಯೇಕ ಪ್ರಮಾಣಪತ್ರ ಬೇಕಾಗಿಲ್ಲ.

ಈ ಹೊಸ ನಿರ್ಧಾರದಿಂದ EPFO ಸದಸ್ಯರ ಕುಟುಂಬಗಳಿಗೆ ವಿಶೇಷವಾಗಿ ಮಕ್ಕಳ ಶಿಕ್ಷಣ ಅಥವಾ ಬದುಕಿನ ಮೂಲಭೂತ ಅಗತ್ಯಗಳಿಗೆ ತ್ವರಿತವಾಗಿ ಹಣ ಲಭ್ಯವಾಗುತ್ತದೆ. EPFO ತೆಗೆದುಕೊಂಡ ಈ ನಿರ್ಧಾರ, ಲಕ್ಷಾಂತರ ಪಿಎಫ್ ಸದಸ್ಯರ ಕುಟುಂಬಗಳಿಗೆ ನಿರಾಳತೆಯನ್ನು ಕಲ್ಪಿಸಿದೆ.

ಇದನ್ನೂ ಓದಿ: ಹಳ್ಳಿಗರ ಆಪ್ತಮಿತ್ರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ | ನಿಮ್ಮ ಮನೆ ಬಾಗಿಲಿಗೆ ನಿಮ್ಮ ಬ್ಯಾಂಕ್

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#EPFO#PFRules#ProvidentFund#EPFUpdate#NewEPFRule#EPFWithdrawal#EmployeesProvidentFund#PFWithoutGuardianship#EPFOGuardianCertificate#ಪಿಎಫ್#ಉದ್ಯೋಗಿಗಳಭವಿಷ್ಯನಿಧಿ#ಗಾರ್ಡಿಯನ್’ಸರ್ಟಿಫಿಕೇಟ್
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...