Udyogatana
ಉದ್ಯೋಗ

ಕೆಕೆಆರ್‌ಟಿಸಿ ಕಂಡಕ್ಟರ್ ನೇಮಕಾತಿ: ಪಿಯುಸಿ ಪಾಸಾದವರಿಗೆ ಅವಕಾಶ | ಸಂಪೂರ್ಣ ವಿವರ ಇಲ್ಲಿದೆ...

ಮಾಲತೇಶ್ ಮಾಳಮ್ಮನವರ್17 Oct 2025, 07:06 pm IST

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 300 ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೆಇಎ ಮೂಲಕ ನೇಮಕಾತಿ ನಡೆಯಲಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ...

ಕೆಕೆಆರ್‌ಟಿಸಿ ಕಂಡಕ್ಟರ್ ನೇಮಕಾತಿ: ಪಿಯುಸಿ ಪಾಸಾದವರಿಗೆ ಅವಕಾಶ | ಸಂಪೂರ್ಣ ವಿವರ ಇಲ್ಲಿದೆ...

KKRTC Conductor Recruitment 2025: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (KKRTC) ಖಾಲಿ ಇರುವ ಕಂಡಕ್ಟರ್ ಹಾಗೂ ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಎರಡೂ ಬಗೆಯ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಿದೆ.

ಉಳಿಕೆ ಮೂಲವೃಂದದ 253 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ 63 ಹುದ್ದೆಗಳು ಸೇರಿ ಒಟ್ಟು 316 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಕೈಗೆತ್ತಿಕೊಳ್ಳಲಾಗಿದೆ.

ವಿದ್ಯಾರ್ಹತೆ ಏನಿರಬೇಕು?

ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಪಿಯುಸಿ ಅಥವಾ ಅದರ ಸಮಾನವಾದ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ ಕಲಾ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗಗಳಲ್ಲಿ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಲ್ಲದೆ ಐಸಿಎಸ್‌ಇ ಅಥವಾ ಸಿಬಿಎಸ್‌ಇ 10+2 ಪ್ರಮಾಣಪತ್ರ ಹೊಂದಿದವರು ಹಾಗೂ ಮೂವರು ವರ್ಷಗಳ ಡಿಪ್ಲೊಮಾ ಪೂರೈಸಿದವರಿಗೂ ಅವಕಾಶವಿದೆ. ಆದರೆ ಈ ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ಮೋಟಾರ್ ವಾಹನ ಕಂಡಕ್ಟರ್ ಪರವಾನಗಿ ಹಾಗೂ ಬ್ಯಾಡ್ಜ್ ಹೊಂದಿರಬೇಕು.

ದೈಹಿಕ ಅಹ್ಥೆಯಾಗಿ ಪುರುಷ ಅಭ್ಯರ್ಥಿಗಳು ಹಾಗೂ ಪುರುಷ ತೃತೀಯ ಲಿಂಗ ಅಭ್ಯರ್ಥಿಗಳು ಕನಿಷ್ಠ 160 ಸೆಂಟಿಮೀಟರ್ ಎತ್ತರ ಹೊಂದಿರಬೇಕು. ಮಹಿಳೆಯರು ಹಾಗೂ ಮಹಿಳಾ ತೃತೀಯ ಲಿಂಗ ಅಭ್ಯರ್ಥಿಗಳು ಕನಿಷ್ಠ 150 ಸೆಂಟಿಮೀಟರ್ ಎತ್ತರ ಹೊಂದಿರಬೇಕು.

ಸಹಾಯಕ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಲು ಕಾನೂನಿನ ಮೂಲಕ ಸ್ಥಾಪಿಸಲಾದ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಮೂರು ವರ್ಷಗಳ ಬ್ಯಾಚುಲರ್ ಪದವಿ (B.Com) ಪಡೆದಿರಬೇಕು. ಈ ಹುದ್ದೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದ್ದು, ಲೆಕ್ಕಪತ್ರಗಳ ಕೆಲಸದಲ್ಲಿ ತಂತ್ರಜ್ಞಾನ ಜ್ಞಾನ ಹೊಂದಿರಬೇಕು.

ಮಾಸಿಕ ವೇತನವೆಷ್ಟು ಸಿಗಲಿದೆ?

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಂಡಕ್ಟರ್ ಹುದ್ದೆಗೆ ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ ₹18,660 ರಿಂದ ₹25,300ರ ವರೆಗೆ ಸಂಬಳ ನೀಡಲಾಗುತ್ತದೆ. ಸಹಾಯಕ ಲೆಕ್ಕಿಗರಿಗೆ ₹23,990 ರಿಂದ ₹42,800ರ ವರೆಗೆ ವೇತನ ಶ್ರೇಣಿ ನಿಗದಿಯಾಗಿದೆ.

ನೇಮಕಾತಿಯ ನಂತರ ಮೊದಲ ಒಂದು ವರ್ಷವನ್ನು ತರಬೇತಿ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹14,000 ತರಬೇತಿ ಭತ್ಯೆ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರವೇ ಪೂರ್ಣಕಾಲಿನ ವೇತನ ಶ್ರೇಣಿಗೆ ಅಭ್ಯರ್ಥಿಗಳು ಅರ್ಹರಾಗುತ್ತಾರೆ.

ವಯೋಮಿತಿ ಎಷ್ಟಿರಬೇಕು?

ಕಂಡಕ್ಟರ್ ಹಾಗೂ ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಇರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ, 2ಎ, 2ಬಿ, 3ಎ ಹಾಗೂ 3ಬಿ ವರ್ಗದವರಿಗೆ 41 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 43 ವರ್ಷವಾಗಿದೆ.

ಕರ್ನಾಟಕ ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ 29 ಸೆಪ್ಟೆಂಬರ್ 2025ರ ಅಧಿಸೂಚನೆಯಂತೆ ಒಂದು ಬಾರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಪರೀಕ್ಷೆ ಪ್ರಕ್ರಿಯೆ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಗಳು ರಾಜ್ಯದ ಬೆಂಗಳೂರು, ಮೈಸೂರು, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಬಳ್ಳಾರಿ, ಕೊಪ್ಪಳ, ವಿಜಯಪುರ, ತುಮಕೂರು ಮತ್ತು ಕಲಬುರ್ಗಿ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಕೆಇಎ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪರೀಕ್ಷಾ ದಿನದಂದು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ ಅಥವಾ ವೋಟರ್ ಐಡಿ ಸೇರಿದಂತೆ ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಗುರುತಿನ ಚೀಟಿ ಇಲ್ಲದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶ ನೀಡಲಾಗುವುದಿಲ್ಲ.

ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ವಿವರ

ಈ ಹುದ್ದೆಗಳಿಗೆ ಸಾಮಾನ್ಯ ಹಾಗೂ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ₹500 ಶುಲ್ಕ ಪಾವತಿಸಬೇಕಾಗುತ್ತದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಿದೆ.

ನೇಮಕ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಲಿಂಕ್ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ ದಿನಾಂಕ

ಅರ್ಜಿ ಸಲ್ಲಿಕೆ ಇದೇ ಅಕ್ಟೋಬರ್ 9ರಿಂದ ಆರಂಭವಾಗಿದೆ. ನವೆಂಬರ್ 1, 2025 ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದೆ. ಶುಲ್ಕ ಪಾವತಿಸಲು ಕೊನೆಯ ದಿನಾಂಕ ನವೆಂಬರ್ 11, 2025 ನಿಗದಿಯಾಗಿದೆ.

ಕೆಕೆಆರ್‌ಟಿಸಿ ಈ ನೇಮಕಾತಿ ಪ್ರಕ್ರಿಯೆ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಅಪೂರ್ವ ಅವಕಾಶವಾಗಿದೆ. ಸರ್ಕಾರಿ ವೇತನ, ಭದ್ರತೆ ಹಾಗೂ ಭವಿಷ್ಯದ ಸ್ಥಿರತೆ ಬಯಸುವವರಿಗೆ ಇದು ಅತ್ಯಂತ ಸುವರ್ಣಾವಕಾಶ. ಅರ್ಹ ಅಭ್ಯರ್ಥಿಗಳು ಸಮಯ ಮಿಸ್ ಮಾಡದೆ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಮೂಲಕ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು...

ಅಧಿಸೂಚನೆ (HK)

Downlaod

ಅಧಿಸೂಚನೆ (NON HK)

Downlaod

ಅರ್ಜಿ ಲಿಂಕ್ (HK)

Apply Now

ಅರ್ಜಿ ಲಿಂಕ್ (NON HK)

Apply Now

ಅಧಿಕೃತ ಜಾಲತಾಣ

cetonline.karnataka.gov.in

ಮಾಲತೇಶ್ ಮಾಳಮ್ಮನವರ್

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಕೆಕೆಆರ್‌ಟಿಸಿ#ಕಂಡಕ್ಟರ್‌ನೇಮಕಾತಿ#ಕೆಇಎನೇಮಕಾತಿ#ಕಲ್ಯಾಣಕರ್ನಾಟಕಸಾರಿಗೆನಿಗಮ#ಉದ್ಯೋಗಾವಕಾಶ#ಕರ್ನಾಟಕಉದ್ಯೋಗ#KKRTC#ConductorRecruitment#KKRTCJobs#KEA#PUCpassJobs#KarnatakaJobs
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...