Udyogatana
ಉದ್ಯೋಗ

ಆರೋಗ್ಯ ಇಲಾಖೆ ನೇಮಕಾತಿ | ಎನ್‌ಎಚ್‌ಎಂ ಯೋಜನೆಯ ವಿವಿಧ ಹುದ್ದೆಗಳ ನೇರ ಸಂದರ್ಶನಕ್ಕೆ ಆಹ್ವಾನ

ಸವಿತಾ ಎಂ.,26 Oct 2025, 12:17 pm IST

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎನ್‌ಎಚ್‌ಎಂ ಮೀಷನ್ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಪೂಣ ಮಾಹಿತಿ ಇಲ್ಲಿದೆ...

ಆರೋಗ್ಯ ಇಲಾಖೆ  ನೇಮಕಾತಿ | ಎನ್‌ಎಚ್‌ಎಂ ಯೋಜನೆಯ ವಿವಿಧ ಹುದ್ದೆಗಳ ನೇರ ಸಂದರ್ಶನಕ್ಕೆ ಆಹ್ವಾನ

NHM Health Department Recruitment 2025: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಧೀನದ ಯೋಜನೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರವಾಗಿ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ನವೆಂಬರ್ 10ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆಗಳ ವಿವರ

ಆರೋಗ್ಯ ಇಲಾಖೆಯ ಒಟ್ಟು 13 ಪದನಾಮದ 23 ಹುದ್ದೆಗಳ ನೇಮಕಾತಿ ನಡೆಯಲಿದ್ದು ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಟೆಕ್ನಿಕಲ್ ಆಫೀಸರ್

01

ಮೆಡಿಕಲ್ ಆಫೀಸರ್

01

ಪಿಐಪಿ ಕನ್ಸಲ್ಟಂಟ್

01

ಎಚ್‌ಆರ್ ಕನ್ಸಲ್ಟಂಟ್

01

ಪ್ರೊಗ್ರಾಂ ಅಸಿಸ್ಟೆಂಟ್

04

ಐಟಿ ಕನ್ಸಲ್ಟಂಟ್

01

ಪ್ರೋಗ್ರಾಮರ್ ಆಪರೇಷನಲ್ ಮ್ಯಾನೇಜರ್

02

ಆರ್‌ಕೆಎಸ್‌ಕೆ ಕನ್ಸಲ್ಟಂಟ್

01

ಪ್ರೊಕ್ಯೂರ್‌ಮೆಂಟ್ ಆಫೀಸರ್

01

ವಾಕ್ಸಿನ್ ಲಾಜಿಸ್ಟಿಕ್ ಮ್ಯಾನೇಜರ್

01

ಫೈನಾನ್ಸಿಯಲ್ ಕನ್ಸಲ್ಟಂಟ್

01

ಪ್ರೋಗ್ರಾಂ ಮ್ಯಾನೇಜರ್

01

ಕನ್ಸಲ್ಟಂಟ್ ಮಾನಿಟರಿಂಗ್

01

ಇದನ್ನೂ ಓದಿ: ಪಿಯುಸಿ, ಪದವೀಧರರಿಗೆ 8,570 ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಸ್ಟೇಷನ್ ಮಾಸ್ಟರ್, ಟಿಕೆಟ್ ಸೂಪರ್ ವೈಸರ್ ಹುದ್ದೆಗಳು

ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ವಿವರ

ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆಗಳಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಕಾಲೇಜಿನಿಂದ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗೆ ಸಂಬAಧಿಸಿದ ಕ್ಷೇತ್ರದಲ್ಲಿ 2 ವರ್ಷದ ಅನುಭವ ಅಗತ್ಯ. ಗರಿಷ್ಠ 45 ವರ್ಷ ವಯೋಮಾನದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮಾಸಿಕವಾಗಿ 25,000 ರೂ. ವೇತನ ನೀಡಲಾಗುತ್ತದೆ.

ವಾಕ್ಸಿನ್ ಲಾಜಿಸ್ಟಿಕ್ ಹುದ್ದೆಗೆ ಫಾರ್ಮಸಿಯಲ್ಲಿ ಪದವಿ ಮುಗಿಸಿದ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷದ ಅನುಭವ ಕೋರಲಾಗಿದೆ. ಗರಿಷ್ಠ 45 ವರ್ಷ ವಯೋಮಾನ ಹೊಂದಿರಬೇಕು. 18,000 ರೂ. ವೇತನ ನೀಡಲಾಗುತ್ತದೆ.

ಅಭ್ಯರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಸ್ಪಷ್ಟವಾಗಿ ಓದಲು, ಬರೆಯಲು ಹಾಗೂ ಮಾತನಾಡಲು ಬರಬೇಕು. ಕನ್ನಡ ಟೈಪಿಂಗ್ ತಿಳಿದಿರಬೇಕು. ಹುದ್ದೆಗಳು ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು ಆಸಕ್ತರು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಫೈನಾನ್ಸ್ ಕನ್ಸಲ್ಟಂಟ್ ಹುದ್ದೆಗೆ ಎಂ.ಕಾಂ, ಎಂಬಿಎ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಒರಲ್ ಹೆಲ್ತ್ ಕನ್ಸಲ್ಟಂಟ್, ಕನ್ಸಲ್ಟಂಟ್ ಎಂಎಚ್, ಸ್ಟೇಟ್ ಲೆಪ್ರೊಸಿ ಕನ್ಸ್ಲ್ಟಂಟ್ ಹುದ್ದೆಗಳಿಗೆ ಎಂಬಿಬಿಎಸ್, ಎಂಡಿ ಪದವಿಯನ್ನು ಪೂರ್ಣಗೊಳಿಸಿರಬೇಕು. ಈ ಹುದ್ದೆಗಳಿಗೆ ಅನುಗುಣವಾಗಿ 25,000 ರೂ. ದಿಂದ 80,000 ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 4,600 ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ | ಗೃಹ ಸಚಿವರ ಮಾಹಿತಿ ಇಲ್ಲಿದೆ...

ನೇರ ಸಂದರ್ಶನ ನಡೆಯುವ ದಿನ: 10-11-2025

ಸಂದರ್ಶನದ ಸ್ಥಳ : Office of Chief Administrative Officer, National Health Mission, 1st Floor West wing, Arogya Soudha, Magadi Road, 1st Cross, Bengaluru 560023

ಗಮನಿಸುವ ಅಂಶಗಳು

  • ಈ ಹುದ್ದೆಗಳಿಗೆ ಕನ್ನಡ ಭಾಷೆಯಲ್ಲಿ ಮಾತನಾಡುವುದು, ಓದುವುದು, ಬರೆಯುವುದು ಮತ್ತು ಟೈಪಿಂಗ್‌ನಲ್ಲಿ ಪ್ರಾವೀಣ್ಯತೆ ಕಡ್ಡಾಯ.

  • ಕಂಪ್ಯೂಟರ್‌ಗಳಲ್ಲಿ ಪ್ರಾವೀಣ್ಯತೆ ಅಂದರೆ ಎಂಎಸ್ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಗೊತ್ತಿರಬೇಕು. ಸಂದರ್ಶನಕ್ಕೆ ಹಾಜರಾಗಲು ಯಾವುದೇ ಟಿಎ/ಡಿಎ ನೀಡಲಾಗುವುದಿಲ್ಲ.

  • ಹುದ್ದೆಗಳ ಸಂಖ್ಯೆ ಮತ್ತು ಸ್ಥಳಗಳು/ಜಿಲ್ಲೆಗಳು ವ್ಯತ್ಯಾಸಕ್ಕೆ ಒಳಪಟ್ಟಿರುತ್ತವೆ.ಆಯ್ಕೆಯನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಮಾಡಲಾಗುತ್ತದೆ.

  • ಒಮ್ಮೆ ಕೆಲಸದಿಂದ ತೆಗೆದುಹಾಕಲಾದ NHM ನೌಕರರು NHM ಅಡಿಯಲ್ಲಿ ಮುಂದಿನ ಉದ್ಯೋಗಕ್ಕೆ ಅರ್ಹರಾಗಿರುವುದಿಲ್ಲ.

  • ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳು/ ಪ್ರಮಾಣಪತ್ರಗಳು ಮತ್ತು ಸ್ವಯಂ ದೃಢೀಕರಿಸಿದ ಪ್ರತಿಗಳು, ನವೀಕರಿಸಿದ ಸಿವಿ ಯ 2 ಪ್ರತಿಗಳು ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ತರಬೇಕು.

  • ಸಂದರ್ಶನ ಪ್ರಕ್ರಿಯೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಮಾತ್ರ ಹೆಚ್ಚಿನ ಮಾಹಿತಿ ದೊರೆಯುತ್ತದೆ ಮತ್ತು ಉಳಿದವರನ್ನು ಆಯ್ಕೆಯಾಗಿಲ್ಲ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: 627 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | PUC, SSLC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ

ಸಹಾಯವಾಣಿ

080-23113588

ಅಧಿಸೂಚನೆ

Download

ಹೆಚ್ಚಿನ ಮಾಹಿತಿಗಾಗಿ

nhm.karnataka.gov.in

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಆರೋಗ್ಯಇಲಾಖೆನೇಮಕಾತಿ#ಆರೋಗ್ಯಮಿಷನ್#ಎನ್‌ಎಚ್‌ಎಂಕರ್ನಾಟಕ#ಆರೋಗ್ಯಮತ್ತುಕುಟುಂಬಕಲ್ಯಾಣ#ಉದ್ಯೋಗಸುದ್ದಿ#NHMRecruitment2025#HealthDepartmentJobs#KarnatakaGovtJobs#NHMKarnataka#WalkInInterview#HealthMission#MedicalOfficerJobs#KarnatakaHealthDepartment
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...