Udyogatana
ಉದ್ಯೋಗ

4,600 ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ | ಗೃಹ ಸಚಿವರ ಮಾಹಿತಿ ಇಲ್ಲಿದೆ...

ನಾಗರಾಜ್ ಯು ಎಂ., 25 Oct 2025, 12:08 pm IST

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 4,600 ಕಾನ್‌ಸ್ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಗೃಹ ಸಚಿವರು ಅಧಿಕೃತ ಮಾಹಿತಿ ನೀಡಿದ್ದು; ಈ ಕುರಿತ ಮಾಹಿತಿ ಇಲ್ಲಿದೆ...

4,600 ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ | ಗೃಹ ಸಚಿವರ ಮಾಹಿತಿ ಇಲ್ಲಿದೆ...

Karnataka Police Constable Recruitment: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಕ್ರಿಯೆಗೆ ಕಡೆಗೂ ಅಧಿಕೃತ ಚಾಲನೆ ಸಿಕ್ಕಿದೆ. ಒಟ್ಟಾರೆ 4,600 ಕಾನ್‌ಸ್ಟೇಬಲ್‌ಗಳ ನೇಮಕಕ್ಕೆ ಇನ್ನು 2-3 ದಿನದಲ್ಲಿ ಅಧಿಸೂಚನೆ ಪ್ರಕಟವಾಗಲಿದೆ.

4,600 ಕಾನ್‌ಸ್ಟೇಬಲ್‌ಗಳ ನೇಮಕಾತಿ ಕುರಿತ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಯುಸಿ, ಪದವೀಧರರಿಗೆ 8,570 ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಸ್ಟೇಷನ್ ಮಾಸ್ಟರ್, ಟಿಕೆಟ್ ಸೂಪರ್ ವೈಸರ್ ಹುದ್ದೆಗಳು

ಹಂತ ಹಂತವಾಗಿ ನೇಮಕಾತಿ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಒಟ್ಟು 15,000 ಕಾನ್‌ಸ್ಟೆಬಲ್‌ಗಳ ಹುದ್ದೆಗಳು ಖಾಲಿ ಇವೆ. ಐದೈದು ಸಾವಿರದಂತೆ ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಎಲ್ಲಾ ಖಾಲಿ ಇರುವ 15,000 ಕಾನ್‌ಸ್ಟೆಬಲ್‌ಗಳ ಹುದ್ದೆಗಳನ್ನು ಒಂದೇ ಬಾರಿಗೆ ನೇಮಕ ಮಾಡಿಕೊಂಡರೆ ಪೂರಕ ತರಬೇತಿ ಕಷ್ಟವಾಗುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: 627 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | PUC, SSLC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ

545 ಸಬ್-ಇನ್‌ಸ್ಪೆಕ್ಟರ್ (SI) ನೇಮಕಾತಿ

ಅದೇ ರೀತಿ 545 ಸಬ್-ಇನ್‌ಸ್ಪೆಕ್ಟರ್ (SI) ಗಳ ನೇಮಕಾತಿ ಕೂಡ ನಡೆದಿದ್ದು, ತರಬೇತಿಯನ್ನು ನೀಡಲಾಗುತ್ತಿದೆ. ಈಗಾಗಲೇ ತರಬೇತಿ ಮುಗಿದಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲರೂ ಇಲಾಖೆಗೆ ಬರುತ್ತಾರೆ.

ಇದರ ಜೊತೆಗೆ 402 ಸಬ್ ಇನ್‌ಸ್ಪೆಕ್ಟರ್ ನೇಮಕ ಆದೇಶ ನೀಡಲಾಗುವುದು. ಒಟ್ಟಾರೆ 900ಕ್ಕೂ ಹೆಚ್ಚು ಸಬ್ ಇನ್‌ಸ್ಪೆಕ್ಟರ್ ಲಭ್ಯರಾಗುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದ್ದಾರೆ.

4,600 ಕಾನ್‌ಸ್ಟೇಬಲ್‌ಗಳ ನೇಮಕಾತಿ ಕುರಿತ ಅಧಿಕೃತ ಅಧಿಸೂಚನೆ ಪ್ರಕಟವಾದ ತಕ್ಷಣ ‘ಉದ್ಯೋಗ ತಾಣ’ದಲ್ಲಿ ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು.

ಇದನ್ನೂ ಓದಿ: ಕೆಕೆಆರ್‌ಟಿಸಿ ಕಂಡಕ್ಟರ್ ನೇಮಕಾತಿ: ಪಿಯುಸಿ ಪಾಸಾದವರಿಗೆ ಅವಕಾಶ | ಸಂಪೂರ್ಣ ವಿವರ ಇಲ್ಲಿದೆ...

ನಾಗರಾಜ್ ಯು ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಕರ್ನಾಟಕಪೊಲೀಸ್#ಕಾನ್‌ಸ್ಟೇಬಲನೇಮಕಾತಿ#ಪೊಲೀಸಉದ್ಯೋಗ#ಗೃಹಸಚಿವಪರಮೇಶ್ವರ್#ಸರ್ಕಾರಿಉದ್ಯೋಗ#ಕೆಪೋಲಿಸ್2025#ಉದ್ಯೋಗತಾಣ#ಕರ್ನಾಟಕಉದ್ಯೋಗ#ಪೊಲೀಸಹುದ್ದೆ#KarnatakaPoliceRecruitment#PoliceConstableJobs#KSPConstableNotification#GovernmentJobs#HomeMinisterParameshwara#KarnatakaJobs#KSP2025#PoliceRecruitment#UdyogaTana
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...