Udyogatana
ಉದ್ಯೋಗ

ಬೆಳಗಾವಿಯಲ್ಲಿ ಪ್ರಾದೇಶಿಕ ಸೇನೆ ರ‍್ಯಾಲಿ | ಎಸ್ಸೆಸ್ಸೆಲ್ಸಿ, ಪಿಯುಸಿ ಅಭ್ಯರ್ಥಿಗಳಿಗೆ ಅವಕಾಶ

ಸವಿತಾ ಎಂ.,27 Oct 2025, 01:19 pm IST

ಬೆಳಗಾವಿಯಲ್ಲಿ ಇದೇ ನವೆಂಬರ್ 21 ಮತ್ತು 22 ರಂದು ಟೆರಿಟೋರಿಯಲ್ ಆರ್ಮಿ ರ‍್ಯಾಲಿ ನಡೆಯಲಿದ್ದು; ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ...

ಬೆಳಗಾವಿಯಲ್ಲಿ ಪ್ರಾದೇಶಿಕ ಸೇನೆ ರ‍್ಯಾಲಿ | ಎಸ್ಸೆಸ್ಸೆಲ್ಸಿ, ಪಿಯುಸಿ ಅಭ್ಯರ್ಥಿಗಳಿಗೆ ಅವಕಾಶ

Belagavi Territorial Army Recruitment 2025: ಪ್ರಾದೇಶಿಕ ಸೇನೆಯಲ್ಲಿ (Territorial Army) ಸೈನಿಕರನ್ನು ನೇಮಕ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದು, ಈ ಕುರಿತಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 1,426 ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಬೆಳಗಾವಿಯಲ್ಲಿ ಇದೇ ನವೆಂಬರ್ 21 ಮತ್ತು 22 ರಂದು ಎರಡು ಹಂತದಲ್ಲಿ ಬೆಳಗಾವಿ ನಗರದ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಸ್ಟೇಡಿಯಂ ನಲ್ಲಿ ರ‍್ಯಾಲಿ ನಡೆಯಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ನೇಮಕಾತಿ | ಎನ್‌ಎಚ್‌ಎಂ ಯೋಜನೆಯ ವಿವಿಧ ಹುದ್ದೆಗಳ ನೇರ ಸಂದರ್ಶನಕ್ಕೆ ಆಹ್ವಾನ

ಹುದ್ದೆಗಳ ವಿವರ

ಸೈನಿಕ ಜೆನರಲ್ ಡ್ಯೂಟಿ

372 ಹುದ್ದೆಗಳು

ಕ್ಲರ್ಕ್

07 ಹುದ್ದೆಗಳು

ಶೆಫ್

19 ಹುದ್ದೆಗಳು

ಸ್ಪೆಷಲ್ ಶೇಫ್

03 ಹುದ್ದೆಗಳು

ಮೆಸ್ ಕುಕ್

02 ಹುದ್ದೆಗಳು

ಹೇರ್ ಡ್ರೆಸ್ಸರ್

05 ಹುದ್ದೆಗಳು

ಟೈಲರ್

01 ಹುದ್ದೆ

ಹೌಸ್ ಕೀಪರ್

03 ಹುದ್ದೆಗಳು

ವಾಷರ್‌ಮಾನ್

04 ಹುದ್ದೆಗಳು

ಆರ್ಟೀಷಿಯನ್ ವುಡ್ ವರ್ಕರ್

02 ಹುದ್ದೆಗಳು

ವಯೋಮಿತಿ ವಿವರ

ಟೆರಿಟೋರಿಯಲ್ ಆರ್ಮಿಯಲ್ಲಿ ಸೈನಿಕರ ವಿವಿಧ ಹಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 42 ವರ್ಷದೊಳಗೆ ಇರಬೇಕು. ಈ ವಯೋಮಿತಿಯಲ್ಲಿರುವವ ಈ ರ‍್ಯಾಲಿಯಲ್ಲಿ ಭಾಗವಹಿಸಬಹುದು.

ಜಿಲ್ಲಾವಾರು ಸೇನಾ ರ‍್ಯಾಲಿ ವಿವರ

ಸೇನಾ ರ‍್ಯಾಲಿಯಲ್ಲಿ ನವೆಂಬರ್ 21ರಂದು ಕೊಪ್ಪಳ, ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಕೊಡಗು, ಹಾಸನ, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಶಿವಮೊಗ್ಗಾ, ರಾಯಚೂರು, ಗದಗ, ಹಾವೇರಿ, ವಿಜಯನಗರ, ಯಾದಗಿರಿ, ವಿಜಯಪುರ, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ ಸೇರಿದಂತೆ ಒಟ್ಟು 24 ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು.

ನವೆಂಬರ್ 22 ರಂದು ರಾಮನಗರ, ಮೈಸೂರು, ಮಂಡ್ಯಾ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಬೆಳಗಾವಿ ಸೇರಿದಂತೆ ಒಟ್ಟು 11 ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಈ ಬೆಟಾಲಿಯನ್’ನಲ್ಲಿ ಒಟ್ಟು 329 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಇದನ್ನೂ ಓದಿ: ಪಿಯುಸಿ, ಪದವೀಧರರಿಗೆ 8,570 ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಸ್ಟೇಷನ್ ಮಾಸ್ಟರ್, ಟಿಕೆಟ್ ಸೂಪರ್ ವೈಸರ್ ಹುದ್ದೆಗಳು

ವಿದ್ಯಾರ್ಹತೆ ಎಷ್ಟಿರಬೇಕು?

ಸೈನಿಕ ಜೆನರಲ್ ಡ್ಯೂಟಿ ನೇಮಕಾತಿಗೆ ಎಸ್‌ಎಸ್‌ಎಲ್‌ಸಿಯನ್ನು ಕನಿಷ್ಠ ಶೇ.45 ಅಂಕಗಳನ್ನು ಪಡೆದಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ರಷ್ಟು ಅಂಕಗಳಿಸಿರಬೇಕು.

ಕ್ಲರ್ಕ್ ಹುದ್ದೆಗಳಿಗೆ ಪಿಯುಸಿ ಶಿಕ್ಷಣವನ್ನು ಕನಿಷ್ಠ ಶೇ 60 ಅಂಕಗಳೊAದಿಗೆ ಪೂರ್ಣಗೊಳಿಸಿರಬೇಕು ಹಾಗೂ ಪ್ರತಿ ವಿಷಯದಲ್ಲಿ 50 ಅಂಕಗಳನ್ನು ಗಳಿಸಿರಬೇಕು. ಇವುಗಳು 7 ವರ್ಷದ ತಾತ್ಕಾಲಿಕ ಹುದ್ದೆ ಆಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ನಂತರ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಆರಂಭ

15-11-2025

ಅರ್ಜಿ ಸಲ್ಲಿಕೆ ಕೊನೇ ದಿನಾಂಕ

01-12-2025

ಹೆಚ್ಚಿನ ಮಾಹಿತಿಗೆ

territorialarmy.in

ಅಧಿಸೂಚನೆ

ncs.gov.in

ಇದನ್ನೂ ಓದಿ: 627 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | PUC, SSLC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ

ಸವಿತಾ ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಟೆರಿಟೋರಿಯಲ್’ಆರ್ಮಿ#ಬೆಳಗಾವಿಸೈನಿಕನೇಮಕಾತಿ#ಆರ್ಮಿನೇಮಕಾತಿ2025#ಬೆಳಗಾವಿಸೇನರ‍್ಯಾಲಿ#ಸೈನಿಕರಭರ್ತಿ#ಪ್ರದೇಶಿಕಸೇನೆ#BelagaviArmyRecruitment#TerritorialArmyRally2025#ArmyJobsIndia#BelagaviRally#DefenceJobs2025#KarnatakaArmyRecruitment#IndianArmyVacancy#JoinIndianArmy
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...