Reserve Bank Recruitment 2025-26 - ರಿಸರ್ವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಾಸಿಕ 6 ಲಕ್ಷ ರೂ. ಸಂಬಳ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗ್ರೂಪ್ ‘ಸಿ’ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...

RReserve Bank Recruitment 2025-26 : ಭಾರತದ ಕೇಂದ್ರೀಯ ಬ್ಯಾಂಕಿಂಗ್ ಸಂಸ್ಥೆಯಾಗಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ಆರ್ಥಿಕ ನೀತಿ ನಿಯಂತ್ರಿಸುವ ಸಂಸ್ಥೆಯಾಗಿದೆ. ಭಾರತದ ಕರೆನ್ಸಿಯನ್ನು ನಿಯಂತ್ರಿಸುವುದರ ಜತೆಗೆ ದೇಶದ ಬ್ಯಾಂಕಿAಗ್ ವ್ಯವಸ್ಥೆಯ ಸ್ಥಿರತೆ ಕಾಪಾಡುತ್ತದೆ.
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಸರ್ವೀಸಸ್ ಬೋರ್ಡ್ ನಲ್ಲಿ (RBISB) ಪ್ರಸ್ತುತ ಡೇಟಾ ಇಂಜಿನಿಯರ್ ಹಾಗು ಡೇಟಾ ಸೈಂಟಿಸ್ಟ್ ಸೇರಿ ಗ್ರೂಪ್ ‘ಸಿ’ಯ ಒಟ್ಟು 93 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಖಾಸಗಿ ವಲಯದ ಪರಿಣತರನ್ನು ಆಕರ್ಷಿಸಲು ಲ್ಯಾಟರಲ್ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ.
ಇವು ಮೂರು ವರ್ಷದ ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು, 3.10 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕಂದಾಯ ಇಲಾಖೆಯ ಪಿಂಚಣಿ ಯೋಜನೆಗಳು | ಯಾರಿಗೆ ಎಷ್ಟು ಪಿಂಚಣಿ? ಅರ್ಜಿ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...
Post Details- ಹುದ್ದೆಗಳ ವಿವರ
ಇಸ್ಲಾರ್ಮೆಷನ್ ಟೆಕ್ನಾಲಜಿ ಡಿಪಾರ್ಟ್ಮೆಂಟ್ | 30 |
ಪ್ರಿಮೈಸಿಸ್ ಡಿಪಾರ್ಟ್’ಮೆಂಟ್ | 05 |
ಸುಪ್ರಿವಿಷನ್ ಡಿಪಾರ್ಟ್ಮೆಂಟ್ | 58 |
ಒಟ್ಟು ಹುದ್ದೆಗಳು | 93 |
Educational Qualification- ವಿದ್ಯಾರ್ಹತೆ ಏನಿರಬೇಕು?
ಆರ್‌ಬಿಐನಲ್ಲಿ ವಿವಿಧ ಹುದ್ದೆಗಳಿದ್ದು, ಹುದ್ದೆಗೆ ಅನುಸಾರ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಡಾಟಾ ಸೈಂಟಿಸ್ಟ್ ಹುದ್ದೆಗೆ ಸ್ಟಾಟಿಸ್ಟಿಕ್, ಅರ್ಥಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ಡಾಟಾ ಇಂಜಿನಿಯರ್ ಹುದ್ದೆಗೆ ಬಿ.ಇ, ಬಿ.ಟೆಕ್, ಬಿಎಸ್ಸ್ಸಿ, ಎಂಎಸ್ ಉತ್ತೀರ್ಣರಾಗಿರಬೇಕು.
Age Limit Details- ವಯೋಮಿತಿ ವಿವರ
ಅಭ್ಯರ್ಥಿಗಳು ಕನಿಷ್ಠ 21 ವರ್ಷದಿಂದ ಗರಿಷ್ಠ 62 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಆಧಾರದ ಮೇಲೆ ವಯೋಮಿತಿಯಲ್ಲಿ ವ್ಯತ್ಯಾಸವಿದೆ. ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ಹೆಚ್ಚು ಸಂಬಳ ನೀಡುವ ಕೇಂದ್ರ ಸರ್ಕಾರಿ ಹುದ್ದೆಗಳು | ಸಂಪೂರ್ಣ ವಿವರ ಇಲ್ಲಿದೆ...
How to Apply?- ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 100 ರೂ, ಇತರರು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು.
Selection Process- ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಕೆ ಮಾಡಿದ ಅರ್ಹ ಅಭ್ಯರ್ಥಿಗಳ ಶಾರ್ಟ್ಸ್ಟ್ ಮಾಡಲಾಗುತ್ತದೆ. ಶಾರ್ಟ್ಸ್ಟ್ ಆದ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಅದರಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಮೆರಿಟ್ ಹಾಗೂ ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.
Last Date to Apply- ಅರ್ಜಿ ಕೊನೆಯ ದಿನಾಂಕ: 06-01-2026
ಅಧಿಸೂಚನೆ | |
ಆನ್‌ಲೈನ್ ಅರ್ಜಿ ಲಿಂಕ್ | |
ಅಧಿಕೃತ ವೆಬ್‌ಸೈಟ್ |
ಸವಿತಾ ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
