Employees Provident Fund- ನೌಕರರ ಭವಿಷ್ಯವನ್ನು ಭದ್ರಗೊಳಿಸುವ ಭವಿಷ್ಯನಿಧಿ (PF) | ಪಿ.ಎಫ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
ಪಿ.ಎಫ್ ಅಥವಾ ಇ.ಪಿ.ಎಫ್ ಪ್ರತಿ ನೌಕರರ ಆಧಾರಸ್ತಂಭವಾಗಿದೆ. ಇದರಿಂದ ನೌಕರರಿಗೆ ಸಿಗುವ ಪ್ರಯೋಜನವೇನು? ಪಿ.ಎಫ್ ಖಾತೆ ನಿರ್ವಹಿಸುವುದು ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ...

Employees Provident Fund- ನಾವು ಕೆಲಸ ಮಾಡುತ್ತಿರುವಾಗ ಪ್ರತೀ ತಿಂಗಳು ಸಂಬಳ ಬರುತ್ತಿರುತ್ತದೆ. ಆದರೆ ನಿವೃತ್ತಿಯ ನಂತರ? ಆ ಸಮಯದಲ್ಲಿ ನಮ್ಮ ಜೀವನವನ್ನು ಆರ್ಥಿಕವಾಗಿ ಸುರಕ್ಷಿತವಾಗಿಡುವ ಅತ್ಯಂತ ಪ್ರಮುಖ ಉಳಿತಾಯ ಯೋಜನೆ ಎಂದರೆ ಭವಿಷ್ಯನಿಧಿ (Provident Fund - PF).
ನೌಕರನೊಬ್ಬ ನಿವೃತ್ತನಾದ ನಂತರ ಅವನ ಭವಿಷ್ಯತ್ತಿನ ಆರ್ಥಿಕ ಭದ್ರತೆಗೆ ‘ನೌಕರರ ಭವಿಷ್ಯನಿಧಿ ಸಂಸ್ಥೆ’ (EPFO) ನಿರ್ವಹಿಸುವ ಉಳಿತಾಯ ಯೋಜನೆಯೇ ಭವಿಷ್ಯನಿಧಿ.
ಇದನ್ನು ಸಾಮಾನ್ಯವಾಗಿ ಪಿ.ಎಫ್. ಅಥವಾ ಇ.ಪಿ.ಎಫ್. ಎಂದು ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ನೌಕರ ಮತ್ತು ಉದ್ಯೋಗದಾತ ಇಬ್ಬರೂ ತಮ್ಮ ಪಾಲಿನ ಹಣವನ್ನು ಪ್ರತೀ ತಿಂಗಳು ವಂತಿಗೆಯಾಗಿ ಜಮಾ ಮಾಡುತ್ತಾರೆ.
ಇದನ್ನೂ ಓದಿ: Atal Pension Yojana - ಈ ಯೋಜನೆಯಡಿ ಸಿಗಲಿದೆ ಪ್ರತಿ ತಿಂಗಳು ₹5000 | ಕೂಡಲೇ ನಿಮ್ಮ ಹೆಸರು ನೋಂದಾಯಿಸಿ
ಪಿ.ಎಫ್. ಯಾರಿಗೆ ಲಭ್ಯ?
ಯಾವ ಸಂಸ್ಥೆಯಲ್ಲಿ ಕನಿಷ್ಠ 20 ಅಥವಾ ಅದಕ್ಕಿಂತ ಹೆಚ್ಚು ನೌಕರರು ಇದ್ದಾರೋ, ಅಂತಹ ಸಂಸ್ಥೆಗಳು ಪಿ.ಎಫ್. ಯೋಜನೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬ ನಿಯಮವಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಖಾಸಗಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಪಿ.ಎಫ್. ಸೌಲಭ್ಯ ಲಭ್ಯವಿದೆ.
ಇದಲ್ಲದೆ, ಕಡ್ಡಾಯವಲ್ಲದ ಸಂಸ್ಥೆಗಳೂ ಸಹ ಸ್ವಯಂ ಸ್ಫೂರ್ತಿಯಿಂದ ಈ ಯೋಜನೆಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಪಿ.ಎಫ್. ವ್ಯವಸ್ಥೆಯೊಳಗೆ ಮುಖ್ಯವಾಗಿ ಎರಡು ವಿಭಾಗಗಳಿವೆ:
ಭವಿಷ್ಯನಿಧಿ (PF)
ನಿವೃತ್ತಿ ವೇತನ ಯೋಜನೆ (EPS - Pension)
ಭವಿಷ್ಯನಿಧಿ ಮತ್ತು ನಿವೃತ್ತಿ ವೇತನದ ವ್ಯತ್ಯಾಸ
ನೌಕರನ ಸಂಬಳದಿಂದ ಪ್ರತೀ ತಿಂಗಳು ಕಡಿತಗೊಳ್ಳುವ ಹಣ ನೇರವಾಗಿ ಪಿ.ಎಫ್. ಖಾತೆಗೆ ಜಮೆಯಾಗುತ್ತದೆ. ಉದ್ಯೋಗದಾತನ ಪಾಲಿನ ಹಣದಲ್ಲಿ 8.33% ನೌಕರರ ನಿವೃತ್ತಿ ವೇತನ (ಪಿಂಚಣಿ) ಖಾತೆಗೆ ಹಾಗೂ 3.67% ಭವಿಷ್ಯನಿಧಿ ಖಾತೆಗೆ ಜಮೆಯಾಗುತ್ತದೆ.
ನಿವೃತ್ತಿ ವೇತನ ಖಾತೆಗೆ ಕನಿಷ್ಠ 10 ವರ್ಷ ಹಣ ಜಮೆಯಾದ ಬಳಿಕ, ಆ ಮೊತ್ತವನ್ನು ಮಧ್ಯದಲ್ಲಿ ಹಿಂಪಡೆಯಲು ಸಾಧ್ಯವಿಲ್ಲ. ನಿವೃತ್ತಿಯಾದ ನಂತರವೇ ಅದು ಪಿಂಚಣಿಯಾಗಿ ದೊರೆಯುತ್ತದೆ.
ಇದನ್ನೂ ಓದಿ: ನೀವೂ ವಿದೇಶಕ್ಕೆ ಹೋಗಬೇಕಾ? ಹಾಗಾದರೆ ಪಾಸ್‌ಪೋರ್ಟ್'ಗೆ ಅರ್ಜಿ ಹಾಕೋದೆಲ್ಲಿ? ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...
ಪಿ.ಎಫ್. ಹಣ ಹಿಂಪಡೆಯುವ ನಿಯಮಗಳು
ಕೆಲಸ ತೊರೆದ 60 ದಿನಗಳ ನಂತರ ಸಂಪೂರ್ಣ ಪಿ.ಎಫ್. ಮೊತ್ತವನ್ನು ಏಕಗಂಟಿನಲ್ಲಿ ಹಿಂಪಡೆಯಬಹುದು.
ಉದ್ಯೋಗದಲ್ಲಿರುವಾಗಲೂ ಮದುವೆ, ಮಕ್ಕಳ ಶಿಕ್ಷಣ, ಮನೆ ಕಟ್ಟುವಿಕೆ, ಆರೋಗ್ಯ ಚಿಕಿತ್ಸೆ ಮುಂತಾದ ಅವಶ್ಯಕತೆಗಳಿಗೆ ಭಾಗಶಃ ಹಿಂಪಡೆಯುವ ಅವಕಾಶ ಇದೆ.
ಒಂದು ಕೆಲಸ ಬಿಟ್ಟು ಕೆಲ ಸಮಯ ಕೆಲಸ ಮಾಡದೇ ಇದ್ದರೂ ನಿಮ್ಮ ಪಿ.ಎಫ್. ಖಾತೆ ಸುರಕ್ಷಿತವಾಗಿರುತ್ತದೆ.
ಮತ್ತೆ ಕೆಲಸಕ್ಕೆ ಸೇರಿದಾಗ ಅದೇ ಖಾತೆಯನ್ನು ಪುನಶ್ಚೇತನಗೊಳಿಸಬಹುದು
ವಂತಿಗೆಯ ನಿರ್ಧರಿತ ಮೊತ್ತ
ಪ್ರತಿ ತಿಂಗಳು ನೌಕರರು ತಮ್ಮ ನಿಗದಿತ ಮೂಲವೇತನದ (ಬೇಸಿಕ್) ಶೇ.12ರಷ್ಟು ಪಾಲು ಮತ್ತು ಉದ್ಯೋಗದಾತರು ಕೂಡಾ ಶೇ.12ರಷ್ಟು ಪಾಲನ್ನು ಭವಿಷ್ಯನಿಧಿ ಯೋಜನೆಗೆ ಹೂಡಿಕೆ ಮಾಡುತ್ತಾರೆ.
ಈ ಪೈಕಿ ಶೇ.8.33ರಷ್ಟು ಉದ್ಯೋಗದಾತರ ಪಾಲಿನ ಮೊತ್ತವನ್ನು ನೌಕರರ ನಿವೃತ್ತಿ ವೇತನಕ್ಕೆ, ಇನ್ನುಳಿದ ಶೇ.3.67ರಷ್ಟು ಮೊತ್ತವನ್ನು ಭವಿಷ್ಯನಿಧಿಗೆ ಜಮೆ ಮಾಡಲಾಗುತ್ತದೆ.
ಪಿ.ಎಫ್. ಯೋಜನೆಯ ಪ್ರಮುಖ ಲಾಭಗಳು
ಇದು ಸುರಕ್ಷಿತ ಮತ್ತು ಸ್ಥಿರ ಉಳಿತಾಯ ಯೋಜನೆ
ಆದಾಯ ತೆರಿಗೆ ವಿನಾಯಿತಿ ಲಭ್ಯ
ಮನೆ, ಶಿಕ್ಷಣ, ಆರೋಗ್ಯದಂತಹ ತುರ್ತು ಸಂದರ್ಭಗಳಿಗೆ ಹಣ ಬಳಕೆ
ನೌಕರ ಉದ್ಯೋಗದಲ್ಲಿರುವಾಗ ಮರಣ ಹೊಂದಿದರೆ 50,000 ರೂ. ದಿಂದ 7 ಲಕ್ಷ ರೂ. ವರೆಗೆ ವಿಮಾ ಸೌಲಭ್ಯ
ನಿವೃತ್ತಿಯ ನಂತರ ಆರ್ಥಿಕ ನೆಮ್ಮದಿ
ಪಿ.ಎಫ್. 2025ರ ಹೊಸ ಬೆಳವಣಿಗೆಗಳು
2025ನೇ ಸಾಲಿನಲ್ಲಿ ಪಿ.ಎಫ್. ವ್ಯವಸ್ಥೆಯಲ್ಲಿ ಹಲವಾರು ನೌಕರಸ್ನೇಹಿ ಬದಲಾವಣೆಗಳು ನಡೆದಿವೆ. ಇಪಿಎಫ್‌ಒ ಡಿಜಿಟಲ್ ಪರಿವರ್ತನೆಯಿಂದ ವ್ಯವಸ್ಥೆ ಹೆಚ್ಚು ಪಾರದರ್ಶಕ ಮತ್ತು ಸುರಕ್ಷಿತವಾಗಿದೆ:
ರಿಯಲ್-ಟೈಮ್ ಡಿಜಿಟಲ್ ಪಾಸ್‌ಬುಕ್
ಪ್ರಸ್ತುತ 8.25% ಬಡ್ಡಿದರ
ಸಂಸ್ಥೆ ಬದಲಿಸಿದಾಗ ಸ್ವಯಂ ಚಾಲಿತ Pಈ ವರ್ಗಾವಣೆ
ನಾಮಿನಿ ನೋಂದಣಿ ಕಡ್ಡಾಯ
ಸಂಪೂರ್ಣ ಆನ್‌ಲೈನ್ ಸೇವೆಗಳು
ಇದನ್ನೂ ಓದಿ: ‘ಗಗನ ಸಖಿ’ ಆಗಲು ಪಿಯುಸಿ ಪಾಸಾದರೆ ಸಾಕು | ಸಂಪೂರ್ಣ ಮಾಹಿತಿ ಇಲ್ಲಿದೆ...
ಭವಿಷ್ಯನಿಧಿಯ ಡಿಜಿಟಲ್ ಪರಿವರ್ತನೆ
ಇಂದು ಪಿ.ಎಫ್. ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಆಗಿದೆ. UAN (Universal Account Number) ಮೂಲಕ ಪಿ.ಎಫ್. ಖಾತೆಯನ್ನು ನಿರ್ವಹಿಸಲಾಗುತ್ತದೆ.
UAN ಪೋರ್ಟಲ್ ಹಾಗೂ UMANG ಮೊಬೈಲ್ ಆ್ಯಪ್ ಮೂಲಕ ಪಾಸ್‌ಬುಕ್ ಪರಿಶೀಲನೆ, ಹಣ ಹಿಂಪಡೆಯುವ ಅರ್ಜಿ, ನಾಮಿನಿ ನೋಂದಣಿ, ಖಾತೆ ವಿವರಗಳ ತಿದ್ದುಪಡಿಯಂತಹ ಕೆಲಸಗಳನ್ನು ಮನೆಯಲ್ಲೇ ಕುಳಿತು ಮಾಡಬಹುದು.
ಪಿ.ಎಫ್. ಖಾತೆ ಹೊಂದಿರುವವರು ಗಮನಿಸಬೇಕಾದ ಅಂಶಗಳು
ಪಾಸ್‌ಬುಕ್ ಅನ್ನು ನಿಯಮಿತವಾಗಿ ಪರಿಶೀಲಿಸಿ
ನಾಮಿನಿಯನ್ನು ತಪ್ಪದೇ ಸೇರಿಸಿ
ಆಧಾರ್, ಪಾನ್, ಬ್ಯಾಂಕ್ ವಿವರಗಳು ಸರಿಯಾಗಿವೆಯೇ ಪರಿಶೀಲಿಸಿ
ಯಾವುದೇ ಅಧಿಕಾರಿಗಳು ಕರೆ ಮಾಡಿ ಪಿ.ಎಫ್. ವಿವರ ಕೇಳುವುದಿಲ್ಲ ಎಚ್ಚರಿಕೆ
OTP ಅಥವಾ ಖಾತೆ ವಿವರಗಳನ್ನು ಯಾರಿಗೂ ನೀಡಬೇಡಿ
ಸಮಸ್ಯೆಗಳಿದ್ದರೆ HR ಅಥವಾ ಪ್ರಾದೇಶಿಕ PF ಕಚೇರಿಯನ್ನು ಸಂಪರ್ಕಿಸಿ
ಸ್ವಯಂ ಪ್ರೇರಿತ ಭವಿಷ್ಯ ನಿಧಿ (VPF)
ಸಾಮಾನ್ಯ ಪಿ.ಎಫ್. ಜೊತೆಗೆ, ನೀವು ಸ್ವಯಂ ಇಚ್ಛೆಯಿಂದ ಹೆಚ್ಚಿನ ಹಣವನ್ನು ಪಿ.ಎಫ್. ಖಾತೆಗೆ ಜಮಾ ಮಾಡಬಹುದು. ಇದನ್ನೇ VPF ಎಂದು ಕರೆಯುತ್ತಾರೆ. ಇದಕ್ಕೆ ಪ್ರತ್ಯೇಕ ಖಾತೆ ಅಗತ್ಯವಿಲ್ಲ.
ನಿಮ್ಮ ಮೂಲ ವೇತನ + DA ಮಿತಿಯೊಳಗೆ ಹೂಡಿಕೆ ಮಾಡಬಹುದಾಗಿದೆ. ವರ್ಷಕ್ಕೆ 2.50 ಲಕ್ಷ ರೂ. ಮೀರಿದರೆ ಮಾತ್ರ ಬಡ್ಡಿಗೆ ತೆರಿಗೆ ಅನ್ವಯವಾಗುತ್ತದೆ. ಅದಕ್ಕೂ ಶೇ.8.25 ರಷ್ಟು ಬಡ್ಡಿ ಲಭ್ಯವಾಗುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿ (PPF)
ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯ
ಬ್ಯಾಂಕ್‌ಗಳ ಮೂಲಕ ತೆರೆಯಬಹುದು
ಸರ್ಕಾರದ ಮೇಲ್ವಿಚಾರಣೆ
ಪ್ರಸ್ತುತ ಶೇ.7.1ರಷ್ಟು ಬಡ್ಡಿದರ
ದೀರ್ಘಾವಧಿಯ ಸುರಕ್ಷಿತ ಉಳಿತಾಯ
ಭವಿಷ್ಯನಿಧಿ ಎಂದರೆ ಕೇವಲ ಸಂಬಳದ ಕಡಿತವಲ್ಲ; ಅದು ನಿಮ್ಮ ನಿವೃತ್ತಿ ಜೀವನದ ಆಧಾರಸ್ತಂಭ ಕೂಡ ಹೌದು. ಇಂದೇ ಸರಿಯಾಗಿ ನಿರ್ವಹಿಸಿದರೆ, ನಾಳೆಯ ಜೀವನ ನೆಮ್ಮದಿಯಾಗಿರುತ್ತದೆ. ನಿಮ್ಮ ಪಿ.ಎಫ್. ಖಾತೆಯನ್ನು ಸದಾ ಅಪ್‌ಡೇಟ್ ಇಟ್ಟುಕೊಳ್ಳಿ....
ಮಾಲತೇಶ್ ಮಾಳಮ್ಮನವರ್
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
