Udyogatana
ಸರ್ಕಾರಿ ಸ್ಕೀಮ್

Top 7 Govt Insurance Schemes- ಕಡಿಮೆ ಪ್ರೀಮಿಯಂ, ಭರ್ಜರಿ ಭದ್ರತೆ | ನಿಮ್ಮ ಕುಟುಂಬಕ್ಕೆ ಅಗತ್ಯವಾದ ಸರಕಾರದ ಟಾಪ್ 7 ವಿಮಾ ಯೋಜನೆಗಳು

ಮಾಲತೇಶ್ ಮಾಳಮ್ಮನವರ್26 Dec 2025, 02:39 pm IST

ಕಡಿಮೆ ಪ್ರಿಮಿಯಂ ನಲ್ಲಿ ಭಾರೀ ಆರ್ಥಿಕ ಭದ್ರತೆ ಒದಗಿಸುವ ಕೇಂದ್ರ ಸರ್ಕಾರದ ಟಾಪ್ 7 ವಿಮಾ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ...

Top 7 Govt Insurance Schemes- ಕಡಿಮೆ ಪ್ರೀಮಿಯಂ, ಭರ್ಜರಿ ಭದ್ರತೆ | ನಿಮ್ಮ ಕುಟುಂಬಕ್ಕೆ ಅಗತ್ಯವಾದ ಸರಕಾರದ ಟಾಪ್ 7 ವಿಮಾ ಯೋಜನೆಗಳು

Top 7 Govt Insurance Schemes: ಇಂದಿನ ಅಸ್ಥಿರ ಜೀವನದಲ್ಲಿ ಆರ್ಥಿಕ ಭದ್ರತೆ ಎಂಬುವುದು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಅನಿರೀಕ್ಷಿತ ಅಪಘಾತ, ಅಕಾಲಿಕ ಸಾವು ಅಥವಾ ಉದ್ಯೋಗ ನಷ್ಟದಂತಹ ಸಂದರ್ಭಗಳಲ್ಲಿ ಕುಟುಂಬವನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬೆಂಬಲಿತ ವಿಮಾ ಯೋಜನೆಗಳು ಕಡಿಮೆ ಪ್ರೀಮಿಯಂಗೆ ಹೆಚ್ಚಿನ ಭದ್ರತೆ ನೀಡುವ ಮೂಲಕ ಸಾಮಾನ್ಯ ಜನರ ದೊಡ್ಡ ಆಧಾರವಾಗಿವೆ.

ಸರ್ಕಾರದ ಈ ವಿಮಾ ಸ್ಕೀಮುಗಳು ಕಡಿಮೆ ಪ್ರೀಮಿಯಂ, ಸರಳ ನಿಯಮ, ವಿಶ್ವಾಸಾರ್ಹ ಕ್ಲೈಮ್ ಪ್ರಕ್ರಿಯೆ ಹಾಗೂ ಗ್ರಾಮೀಣ - ನಗರ ಪ್ರದೇಶದ ಜನರಿಗೆ ಸಮಾನ ಪ್ರವೇಶದ ಕಾರಣದಿಂದಾಗಿ ಸಾಮಾನ್ಯ ಕುಟುಂಬಗಳಿಗೆ ಆರ್ಥಿಕ ರಕ್ಷಾಕವಚವಾಗಿವೆ.

ಕೇಂದ್ರ ಸರ್ಕಾರದ ವಿವಿಧ ಜೀವವಿಮೆ ಹಾಗೂ ಅಪಘಾತ ವಿಮಾ ಯೋಜನೆಗಳು, ಅವುಗಳ ವೈಶಿಷ್ಟ್ಯತೆಗಳು, ಅರ್ಹತೆ ಮತ್ತು ಲಾಭಗಳ ಕುರಿತ ಸಮಗ್ರ ಪರಿಚಯವನ್ನು ಈ ಲೇಖನದಲ್ಲಿ ನೀಡಲಾಗಿದೆ.

1. Postal Life Insurance (PLI) - ಪೋಸ್ಟಲ್ ಲೈಫ್ ಇನ್ಸೂರೆನ್ಸ್

ಭಾರತ ಅಂಚೆ ಇಲಾಖೆ ಮೂಲಕ ನೀಡಲಾಗುವ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (PLI) ದೇಶದಲ್ಲೇ ಅತ್ಯಂತ ಹಳೆಯ ಮತ್ತು ವಿಶ್ವಾಸಾರ್ಹ ಜೀವವಿಮೆ ಯೋಜನೆಗಳಲ್ಲಿ ಒಂದಾಗಿದೆ.

ಪ್ರಾರAಭದಲ್ಲಿ ಅಂಚೆ ಮತ್ತು ಟೆಲಿಗ್ರಾಫ್ ಇಲಾಖೆಯ ನೌಕರರಿಗಾಗಿ ಆರಂಭವಾದ ಈ ಯೋಜನೆ, ಈಗ ಕೇಂದ್ರ-ರಾಜ್ಯ ಸರ್ಕಾರದ ನೌಕರರು, ರಕ್ಷಣಾ ಪಡೆಗಳು, ಕಂಪನಿಗಳ ನೌಕರರು, ಪದವೀಧರರು ಮತ್ತು ಡಿಪ್ಲೊಮಾ ಹೊಂದಿದ ವೃತ್ತಿಪರರಿಗೆ ವಿಸ್ತರಿಸಲಾಗಿದೆ.

PLIಯಲ್ಲಿ ಎಂಡೋಮೆಂಟ್ ಪ್ಲಾನ್, ಹೋಲ್ ಲೈಫ್ ಪಾಲಿಸಿ ಹಾಗೂ ಮಕ್ಕಳ ವಿಮೆಯಂತಹ ವಿವಿಧ ಆಯ್ಕೆಗಳಿವೆ. 50 ಲಕ್ಷ ರೂ.ವರೆಗೆ ವಿಮಾ ಕವರೇಜ್ ಪಡೆಯಬಹುದು. ಅವಧಿ ಪೂರ್ಣಗೊಂಡಾಗ ಅಥವಾ ಪಾಲಿಸಿ ಹೋಲ್ಡರ್ ನಿಧನವಾದರೆ ಬೋನಸ್ ಸಹಿತ ಹಣ ದೊರೆಯುತ್ತದೆ. ಅಗತ್ಯವಿದ್ದರೆ ಸಾಲ ಸೌಲಭ್ಯವೂ ಇದೆ.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್: pli.indiapost.gov.in

2. Rural Postal Life Insurance (RPLI) - ಗ್ರಾಮೀಣ ಪೋಸ್ಟಲ್ ಲೈಫ್ ಇನ್ಸೂರೆನ್ಸ್

1995ರಲ್ಲಿ ಆರಂಭವಾದ ಗ್ರಾಮೀಣ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (RPLI) ಯೋಜನೆ ಗ್ರಾಮೀಣ ಜನತೆಗೆ, ವಿಶೇಷವಾಗಿ ದುರ್ಬಲ ವರ್ಗಗಳು ಮತ್ತು ಮಹಿಳಾ ಕಾರ್ಮಿಕರಿಗೆ ಜೀವವಿಮೆ ಭದ್ರತೆ ನೀಡುವ ಉದ್ದೇಶ ಹೊಂದಿದೆ.

ಗ್ರಾಮೀಣ ಪ್ರದೇಶದ ಕೃಷಿಕರು, ಕಾರ್ಮಿಕರು, ಸರ್ಕಾರಿ ಮತ್ತು ಖಾಸಗಿ ನೌಕರರು, ಸೇನೆ ಹಾಗೂ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಈ ಯೋಜನೆಗೆ ಅರ್ಹರು.

ಹೋಲ್ ಲೈಫ್, ಎಂಡೋಮೆಂಟ್ ಮತ್ತು ಮಕ್ಕಳ ವಿಮೆ ಸೇರಿದಂತೆ ಹಲವು ಪ್ಲಾನ್‌ಗಳು 10 ಲಕ್ಷ ರೂ.ವರೆಗೆ ಕವರೇಜ್ ಒದಗಿಸುತ್ತವೆ. ಸಮೀಪದ ಅಂಚೆ ಕಚೇರಿಯಲ್ಲೇ ಸುಲಭವಾಗಿ ಪಾಲಿಸಿ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್: pli.indiapost.gov.in

3. EDLI Insurance Scheme - ನೌಕರರ ಠೇವಣಿ ಸಂಬಂಧಿತ ವಿಮಾ ಯೋಜನೆ

EDLI (Employees Deposit Linked Insurance Scheme) ಯೋಜನೆ ಇಪಿಎಫ್ ಸದಸ್ಯರಿಗೆ ನೀಡುವ ದೊಡ್ಡ ರಕ್ಷಾಕವಚವಾಗಿದೆ. ಸೇವೆಯಲ್ಲಿರುವ ಸಮಯದಲ್ಲಿ ನೌಕರರು ನಿಧನರಾದರೆ, ಅವರ ಕುಟುಂಬಕ್ಕೆ ಗರಿಷ್ಠ 7 ಲಕ್ಷ ರೂ.ವರೆಗೆ ವಿಮಾ ಪರಿಹಾರ ದೊರೆಯುತ್ತದೆ. ಇದು ಸಂಘಟಿತ ವಲಯದ ನೌಕರರ ಕುಟುಂಬಗಳಿಗೆ ದೊಡ್ಡ ಭರವಸೆಯಾಗಿದೆ.

ಇದರ ಪ್ರಮುಖ ವಿಶೇಷತೆ ಎಂದರೆ ನೌಕರರು ಪ್ರತ್ಯೇಕವಾಗಿ ಪ್ರೀಮಿಯಂ ಪಾವತಿಸಬೇಕಿಲ್ಲ; ಉದ್ಯೋಗದಾತನೇ ಕೊಡುಗೆ ನೀಡುತ್ತಾರೆ. ಕೆಲಸದ ಸ್ಥಳದಲ್ಲಾಗಲಿ ಅಥವಾ ಬೇರೆಡೆ ಆಗಲಿ ಯಾವುದೇ ಕಾರಣದ ಸಾವಿಗೂ ಕವರೇಜ್ ಸಿಗುತ್ತದೆ.

ಹೆಚ್ಚಿನ ಮಾಹಿತಿಗೆ : Download

4. Central Govt Group Insurance (CGEGIS) - ಕೇಂದ್ರ ಸರ್ಕಾರದ ನೌಕರರ ಗುಂಪು ವಿಮಾ ಯೋಜನೆ

ಎಲ್ಲಾ ನಿಯಮಿತ ಕೇಂದ್ರ ಸರ್ಕಾರದ ನೌಕರರಿಗೆ ಕಡ್ಡಾಯವಾಗಿರುವ Central Government Employees Group Insurance Scheme (CGEGIS) ವಿಮೆಯ ಜೊತೆಗೆ ಉಳಿತಾಯದ ಪ್ರಯೋಜನವನ್ನೂ ಒದಗಿಸುತ್ತದೆ. ಪ್ರತಿ ತಿಂಗಳು ಸಂಬಳದಿAದ ಸ್ವಲ್ಪ ಮೊತ್ತ ಕಡಿತಗೊಳ್ಳುತ್ತದೆ.

ಸೇವೆಯಲ್ಲಿದ್ದಾಗ ನೌಕರ ನಿಧನರಾದರೆ ನಾಮನಿರ್ದೇಶಿತರಿಗೆ ವಿಮಾ ಮೊತ್ತ ದೊರೆಯುತ್ತದೆ. ನಿವೃತ್ತಿಯಾದಾಗ ಸಂಗ್ರಹಿತ ಉಳಿತಾಯ ಮೊತ್ತ ನೌಕರರಿಗೆ ಸಿಗುತ್ತದೆ. ಹೀಗೆ ಸೇವೆಯ ಅವಧಿಯಲ್ಲೂ, ನಿವೃತ್ತಿಯ ನಂತರವೂ ಆರ್ಥಿಕ ಭದ್ರತೆ ನೀಡುತ್ತದೆ.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್: doe.gov.in

5. Armed Forces Insurance - ಸಶಸ್ತ್ರ ಪಡೆಗಳ ವಿಶೇಷ ವಿಮಾ ಯೋಜನೆಗಳು

ಸೈನ್ಯ ಗುಂಪು ವಿಮೆ ನಿಧಿ (AGIF), ಅಂಚೆ ಜೀವವಿಮೆ (APLI) ಮತ್ತು ಡಿಫೆನ್ಸ್ ಸ್ಯಾಲರಿ ಪ್ಯಾಕೇಜ್‌ಗಳು (DAPs) ಸಶಸ್ತ್ರ ಪಡೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಲಂಪ್-ಸಮ್ ಪಾವತಿ ವ್ಯಸ್ಥೆ ಹೊಂದಿದ್ದು; ಸ್ವಯಂಚಾಲಿತವಾಗಿ ಸಂಬಳದಿAದ ಪ್ರೀಮಿಯಂ ಕಡಿತಗೊಳ್ಳುತ್ತದೆ.

ಭೂಸೇನೆ, ನೌಕಾಸೇನೆ, ವಾಯುಸೇನೆ, ಃSಈ, ಅISಈ, ಅಸ್ಸಾಂ ರೈಫಲ್ಸ್ ಸೇರಿದಂತೆ ಎಲ್ಲ ಹುದ್ದೆಗಳ ಸಿಬ್ಬಂದಿಗೆ 20 ಸಾವಿರದಿಂದ 20 ಲಕ್ಷ ರೂ.ವರೆಗೆ ವಿಮಾ ಕವರೇಜ್ ಆಗುತ್ತದೆ. ಯುದ್ಧ ಹಾಗೂ ಅಪಘಾತದ ಸಂದರ್ಭದಲ್ಲೂ ರಕ್ಷಣೆ ಸಿಗಲಿದೆ.

6. PM Jeevan Jyoti Bima (PMJJBY) - ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ

Pradhan Mantri Jeevan Jyoti Bima Yojana (PMJJBY)ಯ ದೊಡ್ಡ ವಿಶೇಷತೆ ಎಂದರೆ ವರ್ಷಕ್ಕೆ ಕೇವಲ 436 ರೂ. ಪ್ರೀಮಿಯಂ ಕೊಟ್ಟರೆ 2 ಲಕ್ಷ ರೂ. ದೊರೆಯುವ ಲೈಫ್ ಇನ್ಸೂರೆನ್ಸ್ ಇದು.

18-50 ವರ್ಷದೊಳಗಿನ ಬ್ಯಾಂಕ್ ಅಥವಾ ಅಂಚೆ ಖಾತೆದಾರರು ಈ ಯೋಜನೆಗೆ ಅರ್ಹರು. ಸಹಜ ಸಾವು ಅಥವಾ ಅಪಘಾತ ಸೇರಿದಂತೆ ಯಾವುದೇ ಕಾರಣದಿಂದ ನಿಧನವಾದರೂ ಕುಟುಂಬಕ್ಕೆ ಪರಿಹಾರ ದೊರೆಯುತ್ತದೆ. ಮೆಚೂರಿಟಿ ಬೆನಿಫಿಟ್ ಇಲ್ಲದಿದ್ದರೂ, ಕಡಿಮೆ ವೆಚ್ಚದಲ್ಲಿ ಕುಟುಂಬಕ್ಕೆ ಭದ್ರತೆ ನೀಡುತ್ತದೆ.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್: financialservices.gov.in

7. PM Suraksha Bima (PMSBY) - ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ

ವರ್ಷಕ್ಕೆ ಕೇವಲ 20 ರೂ. ಪ್ರೀಮಿಯಂಗೆ ಸಿಗುವ ವಿಶೇಷ ಅಪಘಾತ ವಿಮೆ ಇದು. 18-70 ವರ್ಷದೊಳಗಿನ ಎಲ್ಲರೂ PMSBY (Pradhan Mantri Suraksha Bima Yojana) ಯೋಜನೆಯ ಲಾಭ ಪಡೆಯಬಹುದು. ಇದರ ಪ್ರಯೋಜನಗಳು ಹೀಗಿವೆ:

  • ಅಪಘಾತ ಸಾವು: 2 ಲಕ್ಷ ರೂ.

  • ಶಾಶ್ವತ ಅಂಗವೈಕಲ್ಯ: 2 ಲಕ್ಷ ರೂ.

  • ಭಾಗಶಃ ಅಂಗವೈಕಲ್ಯ: 1 ಲಕ್ಷ ರೂ.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್: financialservices.gov.in

ಸರ್ಕಾರದ ಈ ವಿಮಾ ಯೋಜನೆಗಳು ಶ್ರೀಮಂತ-ಬಡವ, ನಗರ-ಗ್ರಾಮ ಎನ್ನದೆ ಎಲ್ಲರಿಗೂ ಕೈಗೆಟಕುವ ದರದಲ್ಲಿ ಭದ್ರತೆ ನೀಡುತ್ತವೆ. ಒಂದು ಸಣ್ಣ ಪ್ರೀಮಿಯಂ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸಬಲ್ಲದು. ಇಂದೇ ನಿಮ್ಮ ಅರ್ಹತೆಯ ವಿಮಾ ಯೋಜನೆಯನ್ನು ಆಯ್ಕೆ ಮಾಡಿ, ನಿಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಾಕವಚ ಒದಗಿಸಿ.

ಮಾಲತೇಶ್ ಮಾಳಮ್ಮನವರ್

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#Government Insurance Schemes#Low Premium Insurance India#Best Insurance for Family#PMJJBY Scheme#PMSBY Scheme#Postal Life Insurance#Rural Postal Life Insurance#Government Life Insurance#Accident Insurance India#Social Security Schemes India#Insurance for Common People#ಸರಕಾರಿ ವಿಮಾ ಯೋಜನೆಗಳು#ಕಡಿಮೆ ಪ್ರೀಮಿಯಂ ವಿಮೆ#ಕುಟುಂಬ ಭದ್ರತೆ ವಿಮೆ#ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ#ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ#ಪೋಸ್ಟಲ್ ಲೈಫ್ ಇನ್ಸೂರೆನ್ಸ್#ಗ್ರಾಮೀಣ ಪೋಸ್ಟಲ್ ಲೈಫ್ ಇನ್ಸೂರೆನ್ಸ್#ಸರ್ಕಾರದ ಜೀವವಿಮೆ#ಅಪಘಾತ ವಿಮೆ ಯೋಜನೆ#ಸಾಮಾನ್ಯ ಜನರಿಗೆ ವಿಮೆ
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...