ಎಸ್ಸೆಸ್ಸೆಲ್ಸಿ ಎಕ್ಸಾಂ ಉತ್ತರ ಸಹಿತ ಮಾದರಿ ಪ್ರಶ್ನೆ ಪತ್ರಿಕೆಗಳು ಪ್ರಕಟ | ನೇರ ಲಿಂಕ್ ಇಲ್ಲಿದೆ...
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಎಲ್ಲಾ ವಿಷಯಗಳ ‘ಮಾದರಿ ಪ್ರಶ್ನೆ ಪತ್ರಿಕೆ’ಗಳನ್ನು ಉತ್ತರ ಸಹಿತ ಪ್ರಕಟಿಸಲಾಗಿದೆ. ಜೊತೆಗೆ ಫಲಿತಾಂಶ ಸುಧಾರಣೆಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ...

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಬೇಕೆಂದು ಅವಿರತ ಪ್ರಯತ್ನ ನಡೆಸಿದೆ.
ಈ ಹಿನ್ನಲೆಯಲ್ಲಿ ವಾರ್ಷಿಕ ಪರೀಕ್ಷೆಯ ಎಲ್ಲಾ ವಿಷಯಗಳ ಉತ್ತರ ಸಹಿತ ಮಾದರಿ ಪ್ರಶ್ನೆ ಪತ್ರಿಕೆಗಳನ್ನು (SSLC Answer Key) ಪ್ರಕಟಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಪೂರ್ವ ಸಿದ್ಧತಾ ಪರೀಕ್ಷೆಯನ್ನು (Preparatory Exam) ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ಹೆಚ್ಚು ಸಂಬಳ ನೀಡುವ ಕೇಂದ್ರ ಸರ್ಕಾರಿ ಹುದ್ದೆಗಳು | ಸಂಪೂರ್ಣ ವಿವರ ಇಲ್ಲಿದೆ...
ಮೂರು ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ
ಈ ಮೊದಲು ಮಂಡಳಿಯು ಪ್ರತಿ ವರ್ಷದ ಫೆಬ್ರವರಿಯಲ್ಲಿ ಒಂದು ಪೂರ್ವ ಸಿದ್ಧತಾ ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸುತ್ತಿತ್ತು. ಇದರ ಜತೆಗೆ ಶಾಲಾ ಹಂತದಲ್ಲೇ ಇನ್ನಷ್ಟು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲು ಉತ್ತೇಜಿಸುತ್ತಿತ್ತು.
ಆದರೆ, ಈ ಬಾರಿ ಮಂಡಳಿಯೇ ಮೂರು ಪರೀಕ್ಷೆಗಳಿಗೆ ವೇಳಾಪಟ್ಟಿ ನೀಡಿರುವುದು ವಿಶೇಷವಾಗಿದೆ. ಇದು ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಹೆಚ್ಚು ಸದೃಢರನ್ನಾಗಿಸುವುದರ ಜೊತೆಗೆ ಫಲಿತಾಂಶ ಸುಧಾರಣೆ ಸಹಕಾರಿಯಾಗಲಿದೆ.
ಉತ್ತರ ಸಹಿತ ಮಾದರಿ ಪ್ರಶ್ನೆಪತ್ರಿಕೆ
ಪರೀಕ್ಷಾ ಮಂಡಳಿಯು ಈ ಮೊದಲು ಪರೀಕ್ಷೆಗಳಿಗೆ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಬಾರಿ ಅವುಗಳಿಗೆ ಮಾದರಿ ಉತ್ತರಗಳನ್ನು ನೀಡಿದೆ. ಎಲ್ಲ ವಿಷಯಗಳು ಭಾಷೆ ಹಾಗೂ ಎನ್‌ಎಸ್‌ಕ್ಯೂಎಫ್ ವಿಷಯಗಳು ಸೇರಿದಂತೆ ಒಟ್ಟು 85 ಪ್ರಶ್ನೆಪತ್ರಿಕೆಗಳನ್ನು ವೆಬ್‌ಸೈಟ್’ನಲ್ಲಿ ನೀಡಿದೆ.
ಇದರೊಂದಿಗೆ ಮಾದರಿ ಉತ್ತರಗಳನ್ನು ಪ್ರತ್ಯೇಕವಾಗಿ ಒದಗಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಅಭ್ಯಾಸ ಮಾಡಿ ಮುಖ್ಯ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಸಜ್ಜಾಗಲಿ ಎಂಬ ಆಶಯ ಹೊಂದಲಾಗಿದೆ.
ನಂತರ 3ನೇ ಪರೀಕ್ಷೆಗೆ ಕೊಕ್?
ಪ್ರಸ್ತುತ ಪಿಯು ವಿದ್ಯಾರ್ಥಿಗಳಿಗೂ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ಪ್ರಿಪರೇಟರಿ ಎಕ್ಸಾಂ ಅಯೋಜಿಸಲಾಗುತ್ತಿದೆ.
ಈ ಎಲ್ಲ ಪ್ರಯತ್ನಗಳಿಂದ ಉತ್ತಮ ಫಲಿತಾಂಶ ದೊರೆತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಸಾದಲ್ಲಿ ಮೂರನೇ ಪೂರಕ ಪರೀಕ್ಷೆಯನ್ನು ಕೈಬಿಡುವ ಸಾಧ್ಯತೆಗಳಿವೆ ಎಂಬುದು ಇಲಾಖಾ ವಲಯದಲ್ಲಿ ಸುದ್ದಿ ಇದೆ.
ಈ ಸಾಲಿನ ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ
ಮೊದಲ ಪೂರ್ವ ಸಿದ್ಧತಾ ಪರೀಕ್ಷೆ: ಜನವರಿ 5ರಿಂದ 10ರ ವರೆಗೆ
ಎರಡನೇ ಪೂರ್ವಸಿದ್ಧತಾ ಪರೀಕ್ಷೆ: ಜನವರಿ 27ರಿಂದ ಫೆಬ್ರವರಿ 2ರ ವರೆಗೆ
ಮೂರನೇ ಪೂರ್ವಸಿದ್ಧತಾ ಪರೀಕ್ಷೆ: ಫೆಬ್ರವರಿ 23ರಿಂದ ಫೆಬ್ರವರಿ 28ರ ವರೆಗೆ
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್‌ಲೋಡ್ ಮಾಡಿ...
ಸವಿತಾ ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
