SSLC Exam 2026 Registration- 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ನೋಂದಣಿ ಪ್ರಕ್ರಿಯೆ ಆರಂಭ
2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ನೋಂದಣಿಗಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

SSLC Exam 2026 Registration: ಕರ್ನಾಟಕದ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಏSಇಂಃ) 2026ರ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳಿಂದ ನೋಂದಣಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಬಾರಿ ನೋಂದಣಿ ಪ್ರಕ್ರಿಯೆ ಸರ್ಕಾ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿಯೂ ಪೂರಕವಾಗಿ ನಡೆಯಲಿದೆ.
ಈ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ
ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಶುಲ್ಕ 710 ರೂ. ನಿಗದಿಪಡಿಸಲಾಗಿದೆ. ಆದರೆ, ಕೆಲವು ವಿಶೇಷ ವರ್ಗಗಳಾದ ಬಾಲಕಿಯರು, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಹಾಗೂ ಆದಾಯ ಮಿತಿಯ ಒಳಗೆ ಬರುವ ವಿದ್ಯಾರ್ಥಿUಳಿಗೆ ಶುಲ್ಕ ವಿನಾಯಿತಿ ಕಲ್ಪಿಸಲಾಗಿದೆ.
ಆಯಾ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಅರ್ಹ ವಿದ್ಯಾರ್ಥಿಗಳ ವಿವರಗಳನ್ನು ಶಾಲಾ ಲಾಗಿನ್ ಮೂಲಕ ಅಧಿಕೃತವಾಗಿ ಅಪ್‌ಲೋಡ್ ಮಾಡಬೇಕು. ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕನಿಷ್ಠ 75% ಹಾಜರಾತಿ ಕಡ್ಡಾಯವಿದೆ. ಹಾಜರಾತಿ ನಿಯಮ ಪಾಲನೆಯಿಲ್ಲದೆ ವಿದ್ಯಾರ್ಥಿಗಳ ನೋಂದಣಿ ಸಾಧ್ಯವಿಲ್ಲ.
ಹೊಸದಾಗಿ ನೋಂದಾಯಿಸಬಹುದಾದ ವಿದ್ಯಾರ್ಥಿಗಳು
2011ಕ್ಕೂ ಹಿಂದಿನ ವರ್ಷಗಳಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ತಮ್ಮ ಬಾಕಿ ವಿಷಯಗಳಿಗೆ 2022ರ ಮುಖ್ಯ ಪರೀಕ್ಷೆಯಿಂದ ಸತತ ಆರು ಪ್ರಯತ್ನಗಳ ಅವಕಾಶ ಪಡೆದಿದ್ದರು. ಈ ಆರು ಪ್ರಯತ್ನಗಳನ್ನು ಮೀರಿದವರು ಅಥವಾ ಈ ಸಂದರ್ಭದಲ್ಲಿ ಮತ್ತೊಮ್ಮೆ ಅನುತ್ತೀರ್ಣರಾಗುವವರು ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡು ಎಲ್ಲಾ ಬಾಕಿ ವಿಷಯಗಳನ್ನು ಮತ್ತೆ ಪರೀಕ್ಷಿಸಿಕೊಳ್ಳಬೇಕು.
ಈ ತರಹ ಖಾಸಗಿ ಅಭ್ಯರ್ಥಿಗಳ ನೋಂದಣಿಗೆ ಕೊನೆಯ ದಿನಾಂಕ ಅಕ್ಟೋಬರ್ 31, 2025 ಹಾಗೂ ಶುಲ್ಕ ಪಾವತಿಗೆ ನವೆಂಬರ್ 11, 2025 ರವರೆಗೆ ಅವಕಾಶ ನೀಡಲಾಗಿದೆ.
ಖಾಸಗಿ ಅಭ್ಯರ್ಥಿಗಳಿಗೆ ಆನ್‌ಲೈನ್ ವ್ಯವಸ್ಥೆ
ಖಾಸಗಿ ಹಾಗೂ ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳು 2025-26ನೇ ಸಾಲಿನ ಪರೀಕ್ಷೆ-1ಕ್ಕೆ ನೇರವಾಗಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಮಂಡಳಿ ಪ್ರಕಟಿಸಿದ್ದು; ಲೇಖನದ ಕೊನೆಯಲ್ಲಿ ಅದರ ಲಿಂಕ್ ನೀಡಲಾಗಿದೆ. ವಿದ್ಯಾರ್ಥಿಗಳು ಅದನ್ನು ಡೌನ್‌ಲೋಡ್ ಮಾಡಿಕೊಂಡು ಓದಿ ನೋಂದಣಿ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಎಲ್ಲಾ ನವೀನ ಮಾಹಿತಿಗಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಉತ್ತಮ. ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ನಿರ್ವಹಣೆಯಲ್ಲಿ ಯಾವುದೇ ಅಡೆÀಡತೆ ಸಂಭವಿಸದಂತೆ, ಸಮಯಕ್ಕೆ ಸಮಯಕ್ಕೆ ಸೂಚನೆಗಳನ್ನು ಪಾಲಿಸುವುದು ಮುಖ್ಯವಾಗಿದೆ.
ಮಾರ್ಗಸೂಚಿ ಡೌನ್‌ಲೋಡ್ ಲಿಂಕ್: Download
ಹೆಚ್ಚಿನ ಮಾಹಿತಿಗೆ: kseab.karnataka.gov.in
ಮಾಲತೇಶ್ ಮಾಳಮ್ಮನವರ್
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
