ಹುಬ್ಬಳ್ಳಿ, ಬೆಂಗಳೂರು, ಮೈಸೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕ್ರೀಡಾ ಸಾಧಕರಿಗೆ ಅವಕಾಶ
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ರೈಲ್ವೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ...

South Western Railway Sports Quota Recruitment 2025: ಹುಬ್ಬಳ್ಳಿ ಕೇಂದ್ರವಾಗಿರುವ ನೈಋತ್ಯ ರೈಲ್ವೆಯಲ್ಲಿ ಕ್ರೀಡಾ ಸಾಧಕರು ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಭ್ಯರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಈ ಮೀಸಲು ವಿಭಾಗದಲ್ಲಿ 54 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಅರ್ಹರು ನವೆಂಬರ್ 20 ಅರ್ಜಿಯನ್ನು ಸಲ್ಲಿಸಬೇಕಿದೆ.
ಶೈಕ್ಷಣಿಕ ಅರ್ಹತೆ
ಹುದ್ದೆಗಳ ಶ್ರೇಣಿಯನ್ವಯವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿ ಮಾಡಲಾಗಿದೆ. 5ನೇ ಶ್ರೇಣಿಯ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿಯನ್ನು ಮಾನ್ಯತೆ ಪಡೆದ ಕಾಲೇಜಿನಿಂದ ಪಡೆದಿರಬೇಕು.
4ನೇ ಶ್ರೇಣಿಯ ಹುದ್ದೆಗೆ ಪಿಯುಸಿಯನ್ನು ವಿಜ್ಞಾನ ವಿಭಾಗದಲ್ಲಿ ಅಥವಾ ಬಿಎಸ್.ಸಿ ಪದವಿಯನ್ನು ಪೂರ್ಣಗೊಳಿಸಿರಬೇಕು. 2 ಮತ್ತು 3ನೇ ಶ್ರೇಣಿಯ ಹುದ್ದೆಗಳಿಗೆ ಪಿಯುಸಿ, ಐಟಿಐ ಹಾಗೂ 1ನೇ ಶ್ರೇಣಿ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರಬೇಕು.
ವಯೋಮಿತಿ ವಿವರ
ಕ್ರೀಡಾ ಸಾಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 18 ರಿಂದ 25 ವರ್ಷ ವಯೋಮಿತಿ ಒಳಗಿನವರಾಗಿರಬೇಕು. ಅಂದರೆ 2001ರಿಂದ 2008ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ನೈಋತ್ಯ ರೈಲ್ವೆ ವಲಯ ಕಚೇರಿಯ ಅಧಿಕೃತ ವೆಬ್‌ಸೈಟ್ rrchubli.inಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅರ್ಹ ಅಭ್ಯರ್ಥಿಗಳನ್ನು ಕ್ರೀಡಾ ಪರೀಕ್ಷೆಗೆ (ಆಯ್ಕೆ ಟ್ರಯಲ್ಸ್) ಆಹ್ವಾನಿಸಲಾಗುತ್ತದೆ. ಈ ಪರೀಕ್ಷೆಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮುಂದಿನ ಹಂತದ ಆಯ್ಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಶುಲ್ಕವೆಷ್ಟು?
ಸಾಮಾನ್ಯ ವರ್ಗದವರಿಗೆ 500 ರೂ. ಹಾಗೂ ಉಳಿದವರಿಗೆ 250 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ತದನಂತರ ಅರ್ಹತೆ, ವೈದ್ಯಕೀಯ ಪರೀಕ್ಷೆ ಅಧಿಕೃತ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ವಿವರ
5/4ನೇ ಶ್ರೇಣಿಯ ಒಟ್ಟು 5 ಹುದ್ದೆಗಳಿದ್ದು, ಅಥ್ಲೆಟಿಕ್ಸ್ (400 ಮೀ), ಬಾಸ್ಕೆಟ್ ಬಾಲ್ (ಮಹಿಳೆ) ಕ್ರಿಕೆಟ್, ಗಾಲ್ಫ್ ಆಟಗಾರರಿಗೆ ಮೀಸಲಾಗಿವೆ.
3/2 ನೇ ಶ್ರೇಣಿ ಹುದ್ದೆಗಳನ್ನು ಅಥ್ಲೆಟಿಕ್ಸ್ (110 ಮೀ) ಮಹಿಳೆಯರ ಅಥ್ಲೆಟಿಕ್ಸ್ (800 ಮೀ/ 1500 ಮೀ) ಶಾಟ್ ಪುಟ್, ಬಾಸ್ಕೆಟ್ ಬಾಲ್, ದೇಹದಾರ್ಡ್ಯ (ಬಾಡಿಬಿಲ್ಡಿಂಗ್) ಸ್ಪರ್ಧೆಯ ಕ್ರೀಡಾಪಟುಗಳಿಗೆ ಮೀಸಲಾಗಿವೆ. ಒಟ್ಟು 16 ಹುದ್ದೆಗಳನ್ನು ಈ ವಿಭಾಗದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ವಿಭಾಗೀಯ ಮುಖ್ಯ ಕಚೇರಿಯಲ್ಲಿ 1ನೇ ಶ್ರೇಣಿಯ ಹುದ್ದೆಯಲ್ಲಿ ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಗಾಲ್ಫ್, ವಾಟರ್ ಪೋಲೊ ಆಟಗಾರರಿಗೆ ಒಟ್ಟು 10 ಹುದ್ದೆಗಳಿವೆ.
ಬೆಂಗಳೂರು ವಲಯದಲ್ಲಿ 1ನೇ ಶ್ರೇಣಿಯ ಹುದ್ದೆಗಳಿಗೆ ಅಥ್ಲೆಟಿಕ್ಸ್ (ಪುರುಷರು ಮತ್ತು ಮಹಿಳೆಯರು) ಕ್ರಿಕೆಟ್ (ಮಹಿಳೆ) ಸೇರಿ ಒಟ್ಟು ಐವರನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಹುಬ್ಬಳ್ಳಿ ವಿಭಾಗದಲ್ಲಿ ಅಥ್ಲೆಟಿಕ್ಸ್ (ಮಹಿಳೆ) ಹಾಕಿ (ಪುರುಷ) ಸೇರಿ ಒಟ್ಟು 5 ಹುದ್ದೆಗಳಿವೆ.
ಮೈಸೂರು ವಿಭಾಗದಲ್ಲಿ ಬಾಸ್ಕೆಟ್ ಬಾಲ್ (ಮಹಿಳೆ), ಚೆಸ್ (ಪುರುಷ), ಸ್ವಿಮ್ಮಿಂಗ್ (ಪುರುಷ), ಟೇಬಲ್ ಟೆನಿಸ್ (ಪುರುಷ) ಒಟ್ಟು 5 ಹುದ್ದೆಗಳನ್ನು ಭರ್ತಿ ಮಾಡಿಕಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 20-11-2025
ಅಧಿಸೂಚನೆ: Download
ನಾಗರಾಜ್ ಯು ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
