ಸೆಬಿ ನೇಮಕಾತಿ 2025 | ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸೆಬಿಯಿಂದ ವಿವಿಧ ವಿಭಾಗದ 110 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ...

SEBI Recruitment 2025: ಸೆಬಿ ಅರ್ಥಾತ್ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ ಆಫೀಸರ್ ಗ್ರೇಡ್ (ಎ) ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು; ಜುಲೈ 27ರಂದು ಮೊದಲನೇ ಹಂತದ ಪರೀಕ್ಷೆ ಮತ್ತು ಆಗಸ್ಟ್/ಸೆಪ್ಟೆಂಬರ್‌ನಲ್ಲಿ ಎರಡನೇ ಹಂತದ ಪರೀಕ್ಷೆ ನಡೆಸುವುದಾಗಿ ಸೆಬಿ ಪ್ರಕಟಿಸಿದೆ.
ಹುದ್ದೆಗಳ ವಿವರ
ಜನರಲ್ ವಿಭಾಗ | 56 ಹುದ್ದೆಗಳು |
ಲೀಗಲ್ ವಿಭಾಗ | 20 ಹುದ್ದೆಗಳು |
ರಿಸರ್ಚ್ ವಿಭಾಗ | 04 ಹುದ್ದೆಗಳು |
ಇನ್ಫಾರ್ಮೆಶನ್ ಟೆಕ್ನಾಲಜಿ ವಿಭಾಗ | 22 ಹುದ್ದೆಗಳು |
ಅಫಿಶಿಯಲ್ ಲಾಂಗ್ವೇಜ್ ವಿಭಾಗ | 01 ಹುದ್ದೆ |
ಎಂಜಿನಿಯರಿಂಗ್ ವಿಭಾಗ | 07 ಹುದ್ದೆಗಳು |
ಒಟ್ಟು ಹುದ್ದೆಗಳು | 110 ಹುದ್ದೆಗಳು |
ಅರ್ಹತೆಗಳೇನು?
ಜನರಲ್ ಸ್ಟ್ರೀಮ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿ/ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ (ಎರಡು ವರ್ಷಗಳ ಕೋರ್ಸ್) ಅಥವಾ ಕಾನೂನು/ಎಂಜಿನಿಯರಿಂಗ್ ವಿಭಾಗದಲ್ಲಿ ಪದವೀಧರರಾಗಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ.
ಕಾನೂನು ಪದವೀಧರರು ಲೀಗಲ್ ವಿಭಾಗದ ಹುದ್ದೆಗಳಿಗೂ, ಎಂಜಿನಿಯರಿಂಗ್ ಹಿನ್ನೆಲೆಯುಳ್ಳವರು ಇನ್‌ಫಾರ್ಮೆಶನ್ ಟೆಕ್ನಾಲಜಿ/ಎಲೆಕ್ಟರ್ ಎಂಜಿನಿಯರಿಂಗ್ ವಿಭಾಗದ ಹುದ್ದೆಗಳಿಗೆ ಪ್ರಯತ್ನಿಸಬಹುದು.
ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪದವಿ ಪಡೆದವರು ಆಫೀಶಿಯಲ್ ಲಾಂಗ್ವೇಜ್ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ರಿಸರ್ಚ್ ವಿಭಾಗದ ಹುದ್ದೆಗಳಿಗೆ ಎಕನಾಮಿಕ್ಸ್, ಕಾಮರ್ಸ್, ಬಿಸ್ಸೆಸ್ ಅಡ್ಮಿನಿಸ್ಟೇಷನ್, ಫೈನಾನ್ಸಿಯಲ್ ಎಕನಾಮಿಕ್ಸ್ ಸೇರಿದಂತೆ ಇದಕ್ಕೆ ಪೂರಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶವಿದೆ.
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ವರ್ಷ, ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ ವೇತನದ ವಿವರ
ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 1000 ರೂ. ಹಾಗೂ ಎಸ್‌ಸಿ/ಎಸ್‌ಟಿ, ವಿಶೇಷಚೇತನ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕದ ಜೊತೆಗೆ ಶೇಕಡಾ 18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಪ್ರೊಬೆಷನರಿ ಅವಧಿ ಇರುತ್ತದೆ. ವೇತನ ಶ್ರೇಣಿ 62,500 ರೂ. ದಿಂದ 1,61,100 ರೂ. ನಿಗದಿಮಾಡಲಾಗಿದೆ. ಈ ದೇಶದಾದ್ಯಂತ ಸೆಬಿಯ ಯಾವುದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಸಿದ್ದರಾಗಿರಬೇಕು.
ಪರೀಕ್ಷೆ ಹೇಗಿರುತ್ತದೆ?
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಎರಡು ಹಂತದ ಪರೀಕ್ಷೆಗಳಲ್ಲಿಯೂ ಪತ್ರಿಕೆ-1 ಮತ್ತು ಪತ್ರಿಕೆ-2 ಇರುತ್ತದೆ. ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ /ಹಿಂದಿಯಲ್ಲಿರುತ್ತವೆ. ಈ ಎರಡೂ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ರಾಜ್ಯದಲ್ಲಿ ಮೊದಲನೇ ಹಂತದ ಪರೀಕ್ಷೆ ಬೆಂಗಳೂರು, ಬೆಳಗಾವಿ, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಹಾಗೂ ಮತ್ತು ಎರಡನೇ ಹಂತದ ಪರೀಕ್ಷೆ ರಾಜಧಾನಿ ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 28-11-2025 |
ಮೊದಲನೇ ಹಂತದ ಪರೀಕ್ಷೆ | 10-01-2026 |
ಎರಡನೇ ಹಂತದ ಪರೀಕ್ಷೆ | 21-02-2026 |
ಅಧಿಸೂಚನೆ: Download
ಅಧಿಕೃತ ಜಾಲತಾಣ: sebi.gov.in
ಸವಿತಾ ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
