Udyogatana
ಉದ್ಯೋಗ

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಬೆಂಗಳೂರು ರೈಲು ಗಾಲಿ ಕಾರ್ಖಾನೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಾಗರಾಜ್ ಯು ಎಂ., 7 Nov 2025, 01:33 pm IST

ಎಸ್ಸೆಸ್ಸೆಲ್ಸಿ ಪಾಸಾದವರಿಂದ ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ...

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಬೆಂಗಳೂರು ರೈಲು ಗಾಲಿ ಕಾರ್ಖಾನೆ ಹುದ್ದೆಗಳಿಗೆ ಅರ್ಜಿ ಆಹ್ವಾನ

Rail Wheel Factory Recruitment 2025: ರಾಜಧಾನಿ ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯಲ್ಲಿ 2025-26ನೇ ಸಾಲಿಗೆ ಕ್ರೀಡಾ ಕೋಟಾದಡಿ ನೇಮಕ ನಡೆಯಲಿದೆ. ವಿವಿಧ ಕ್ರೀಡೆಗಳಿಗೆ ಮೀಸಲಿಟ್ಟ 15 ಹುದ್ದೆಗಳಿದ್ದು, ಈ ಎಲ್ಲಾ ಹುದ್ದೆಗಳಿಗೆ ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿರಬೇಕು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಕ್ರಿಕೆಟ್, ಹಾಕಿ, ಕಬಡ್ಡಿ, ಫುಟ್ಬಾಲ್, ಚೆಸ್ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದ್ದು, ಈ ಕ್ರೀಡೆಗಳಲ್ಲಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ

  • ನೇಮಕಾತಿ ಸಂಸ್ಥೆ : ರೈಲು ಗಾಲಿ ಕಾರ್ಖಾನೆ, ಯಲಹಂಕ

  • ಖಾಲಿ ಹುದ್ದೆಗಳು : 15 ಹುದ್ದೆಗಳು

  • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮೂಲಕ

  • ಉದ್ಯೋಗ ಸ್ಥಳ : ಬೆಂಗಳೂರು

ಅರ್ಜಿ ಸಲ್ಲಿಸಬೇಕಾದ ವಿಳಾಸ

Rail Wheel Factory, General Manager Office, Labor Department, Yelahanka, Bangalore-56006

ನಾಗರಾಜ್ ಯು ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ರೈಲುಗಾಲಿಕಾರ್ಖಾನೆ#ಬೆಂಗಳೂರುಉದ್ಯೋಗ#ಸರ್ಕಾರಉದ್ಯೋಗ#ಕ್ರೀಡಾಕೋಟಾನೇಮಕಾತಿ#ರೈಲ್ವೇಉದ್ಯೋಗ#ಕರ್ನಾಟಕಉದ್ಯೋಗ#RailWheelFactory#BangaloreJobs#RailwayRecruitment#SSLCJobs#SportsQuotaJobs#GovernmentJobs#KarnatakaJobs#IndianRailways
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...