ಧಾರವಾಡ, ಬೆಂಗಳೂರು, ಕಲಬುರಗಿ ವಲಯ ನಬಾರ್ಡ್ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಅವಕಾಶ
ಪ್ರತಿಷ್ಠಿತ ನಬಾರ್ಡ್ ಫೈನಾನ್ಸಿಯಲ್ ಸರ್ವೀಸಸ್ ಸಂಸ್ಥೆಯ ಫಿಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ, ಬೆಂಗಳೂರು ಹಾಗೂ ಕಲಬುರಗಿ ವಲಯದಲ್ಲಿ ಖಾಲಿ ಹುದ್ದೆಗಳಿದ್ದು; ಅರ್ಜಿ ಸಲ್ಲಿಕೆಯ ವಿವರ ಇಲ್ಲಿದೆ...

NABFINS Field Officer Recruitment: ನಬಾರ್ಡ್ ಫೈನಾನ್ಸಿಯಲ್ ಸರ್ವೀಸಸ್ ಸಂಸ್ಥೆಯಲ್ಲಿ (NABFINS Limited) ಗ್ರಾಹಕ ಸೇವಾ ಅಧಿಕಾರಿ (Customer Service Officer - CSO) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಧಾರವಾಡ, ಬೆಂಗಳೂರು, ಕಲಬುರಗಿ ವಿಭಾಗದಲ್ಲಿ ಫೀಲ್ಡ್ ಆಫೀಸರ್‌ಗಳಾಗಿ ಕಾರ್ಯನಿರ್ವಹಿಸಲು ಆಸಕ್ತ ಪಿಯುಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಿಎಸ್‌ಒ ಕೆಲಸದ ಜವಾಬ್ದಾರಿಗಳು
ಇದೊಂದು ಕ್ಷೇತ್ರ ಅಧಿಕಾರಿಯ (Field Officer) ಕಾರ್ಯವಾಗಿದ್ದು; ಹೊಸ ಗ್ರಾಹಕರ ಸೇರ್ಪಡೆ ಮತ್ತು ಶಾಖೆಗೆ ಸುಸ್ಥಿರ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದು ಸಿಎಸ್‌ಒ ಹುದ್ದೆಯ ಪ್ರಾಥಮಿಕ ಕೆಲಸವಾಗಿರುತ್ತದೆ.
ಇದರ ಜೊತೆಗೆ ಹೊಸ ವ್ಯವಹಾರ ಸ್ಥಳಗಳನ್ನು ಗುರುತಿಸುವುದು, ಸೋರ್ಸಿಂಗ್ ಮಾಡುವುದು ಮತ್ತು ಸಂಭಾವ್ಯ ಗ್ರಾಹಕರನ್ನು ಸೇರಿಸಬೇಕು. ಸಾಲ ವಿತರಣೆಯ ನಂತರ ಗ್ರಾಹಕರಿಂದ ನಿಗದಿತ ದಿನಾಂಕಗಳಲ್ಲಿ ಕಂತುಗಳನ್ನು ಸಂಗ್ರಹಿಸಬೇಕಾಗುತ್ತದೆ.
ಅರ್ಹತೆ ಮತ್ತು ಅನುಭವ
ನಬಾರ್ಡ್ ಫೈನಾನ್ಸಿಯಲ್ ಸರ್ವೀಸ್ ಸಂಸ್ಥೆಯ ಗ್ರಾಹಕ ಸೇವಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಪಿಯುಸಿ (10+2) ಉತ್ತೀರ್ಣರಾಗಿದ್ದರೆ ಸಾಕು. ಅಭ್ಯರ್ಥಿಯ ಗರಿಷ್ಠ ವಯಸ್ಸಿನ ಮಿತಿ 33 ವರ್ಷಗಳು.
ಯಾವುದೇ ಅನುಭವದ ಅಗತ್ಯವಿಲ್ಲ. ಹೊಸಬರು ಅರ್ಜಿ ಸಲ್ಲಿಸಲು ಅವಕಾಶವಿದೆ. ವೈಲ್ಡ್ ಚಾಲನಾ ಪರವಾನಗಿ ಮತ್ತು ದ್ವಿಚಕ್ರ ವಾಹನ ಹೊಂದಿರುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಕೆ ವಿವರ
ಆನ್‌ಲೈನ್ ಅರ್ಜಿಯನ್ನು ನವೆಂಬರ್ 15ರ ಒಳಗಾಗಿ ಸಲ್ಲಿಸಬೇಕು. ಆಸಕ್ತರು ನಬಾರ್ಡ್ ಫೈನಾನ್ಸಿಯಲ್ ಸರ್ವೀಸ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿನ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇದೇ ನವೆಂಬರ್ 15ರೊಳಗಾಗಿ ಅಗತ್ಯ ದಾಖಲೆಗಳ ಸಹಿತ ಅಪ್‌ಲೋಡ್ ಮಾಡಬೇಕು.
nabfins.orgಗೆ ಭೇಟಿ ನೀಡಿ ಅಲ್ಲಿ ಕರ್ನಾಟಕ ರಾಜ್ಯವನ್ನು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಧಾರವಾಡ, ಬೆಂಗಳೂರು ಹಾಗೂ ಕಲಬುರಗಿ ವಿಭಾಗಗಳಲ್ಲಿ ನಿಮ್ಮ ವಿಭಾಗವನ್ನು ಸೆಲೆಕ್ಟ್ ಮಾಡಿಕೊಂಡು ಅಲ್ಲಿ ಕೆಳುವ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಲಿಂಕ್ ಮತ್ತು ಅಧಿಸೂಚನೆ: nabfins.org
ಸವಿತಾ ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
