Udyogatana
ಉದ್ಯೋಗ

1,650 ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಮರುಹಂಚಿಕೆ | ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ...

ಮಾಲತೇಶ್ ಮಾಳಮ್ಮನವರ್•28 Oct 2025, 01:16 pm IST•
•

ಕರ್ನಾಟಕ ಪೊಲೀಸ್ ಇಲಾಖೆಯ ಒಟ್ಟು 4,656 ಹುದ್ದೆಗಳ ನೇಮಕಕ್ಕೆ ಚಾಲನೆ ನೀಡಲಾಗಿದ್ದು; ಈ ಪೈಕಿ ಸಶಸ್ತ್ರ ಪೊಲೀಸ್ ಪಡೆಗಳಲ್ಲಿನ 1,650 ಕಾನ್‌ಸ್ಟೆಬಲ್ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ...

1,650 ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಮರುಹಂಚಿಕೆ | ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ...

ಪೊಲೀಸ್ ಇಲಾಖೆಯು ಸಶಸ್ತ್ರ ಪೊಲೀಸ್ ಪಡೆ ಹಾಗೂ ಮೀಸಲು ಪಡೆ ಹಾಗೂ ಸಿವಿಲ್ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದಕ್ಕಾಗಿ ಹುದ್ದೆಗಳ ಮರುಹಂಚಿಕೆ ನಡೆಸಲಾಗಿದೆ.

ಸಶಸ್ತ್ರ ಪೊಲೀಸ್ ಪಡೆಗಳಲ್ಲಿನ 1,650 ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಮೀಸಲಾತಿ ಅನ್ವಯ ಹುದ್ದೆಗಳನ್ನು ಮರು ಹಂಚಿಕೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದಾರೆ.

ಮೀಸಲು ಹುದ್ದೆಗಳ ವಿವರ

ಒಟ್ಟಾರೆ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ 179. ಸಾಮಾನ್ಯ ವೃಂದದ ಜಿಲ್ಲೆಗಳಿಗೆ 1,421 ಹುದ್ದೆ ಹಾಗೂ ಕ್ರೀಡಾ ವಿಭಾಗಕ್ಕೆ 50 ಹುದ್ದೆಗಳನ್ನು ಮೀಸಲಿಡಲಾಗಿದೆ. ಆಡಳಿತಾತ್ಮಕ ಕಾರಣಗಳಿಗಾಗಿ ಹಿಂದೆ ನಿಗದಿಯಾಗಿದ್ದ ಹುದ್ದೆಗಳನ್ನು ಈಗ ಮರುಹಂಚಿಕೆ ಮಾಡಲಾಗಿದೆ.

ವಿವಿಧ ಘಟಕಗಳಿಗೆ ಹುದ್ದೆಗಳನ್ನು ವರ್ಗೀಕರಣಗೊಳಿಸಿ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಆಯಾ ಘಟಕಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಮೊದಲ ಹಂಚಿಕೆ ಮಾಡಲಾಗಿರುವ ವೇಳೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ 275, ಸಾಮಾನ್ಯ ವೃಂದದ ಜಿಲ್ಲೆಗಳಿಗೆ 1,375 ಹುದ್ದೆಗಳಿದ್ದವು.

ಈ ಮೊದಲು ಬೆಂಗಳೂರು ಜಿಲ್ಲೆ, ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹುದ್ದೆಗಳನ್ನು ತೋರಿಸಿರಲಿಲ್ಲ. ಆದರೆ, ಮರು ಹಂಚಿಕೆಯಲ್ಲಿ ಹುದ್ದೆಗಳನ್ನು ನೀಡಲಾಗಿದೆ. ಹಾಸನ, ಚಾಮರಾಜನಗರ, ಬೆಳಗಾವಿ, ಗದಗ ಹಾಗೂ ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳು ಈಗ ಹುದ್ದೆಗಳನ್ನು ಕಳೆದುಕೊಂಡಿವೆ.

ಜಿಲ್ಲಾವಾರು ಹುದ್ದೆಗಳ ವಿವರ

ಇದೀಗ ಹೊಸದಾಗಿ ಹುದ್ದೆಗಳ ಹಂಚಿಕೆ ಮಾಡಲಾಗಿದ್ದು; ಪ್ರಸ್ತುತ ಹಂಚಿಕೆಯಾದ ಹುದ್ದೆಗಳ ಸಂಖ್ಯೆಗಳ ಜೊತೆಗೆ ಹಿಂದೆ ಹಂಚಿಕೆಯಾದ ಹುದ್ದೆಗಳ ಸಂಖ್ಯೆಗಳನ್ನು ಆವರಣದಲ್ಲಿ ಈ ಕೆಳಗೆ ನೀಡಲಾಗಿದೆ:

ಮೈಸೂರು ನಗರ

1,031 (730)

ಮಂಗಳೂರು ನಗರ

55 (29)

ಬೆಂಗಳೂರು

ಜಿಲ್ಲೆ 15(-)

ಚಿಕ್ಕಬಳ್ಳಾಪುರ

45 (36)

ಮೈಸೂರು ಜಿಲ್ಲೆ

40 (29)

ಕೊಡಗು

35 (31)

ಮಂಡ್ಯ

45 (30)

ಶಿವಮೊಗ್ಗ

45 (54)

ಚಿತ್ರದುರ್ಗ

24 (41)

ಡಿ.ಕೆ.ಮಂಗಳೂರು

10 (-)

ಉಡುಪಿ

45 (36)

ಕಾರವಾರ

55 (20)

ಚಿಕ್ಕಮಗಳೂರು

20 (17)

ಧಾರವಾಡ

15 (18)

ಕಲಬುರಗಿ

15 (21)

ವಿಜಯನಗರ

80 (121)

ಕೆಎಆರ್‌ಪಿ ಮೌಟೆಂಡ್ ಕಂಪನಿ

32 (32)

ಒಟ್ಟು ಹುದ್ದೆಗಳು

1,650

ನೇಮಕಕ್ಕೆ ಗುರುತಿಸಿರುವ ಹುದ್ದೆಗಳ ವಿವರ

ಕರ್ನಾಟಕ ಪೊಲೀಸ್ ಇಲಾಖೆ ಒಟ್ಟು 4,656 ಹುದ್ದೆಗಳ ನೇಮಕಕ್ಕೆ ಚಾಲನೆ ನೀಡಲಾಗಿದ್ದು; ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟವಾಗಲಿದೆ. ನೇಮಕಕ್ಕೆ ಗುರುತಿಸುವ ಹುದ್ದೆಗಳ ವಿವರ ಹೀಗಿವೆ:

ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ (DSI)

20

ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (APC)

1,650

ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ (Civil)

614

ಸ್ಟೆ.ರಿಸರ್ವ್ ಪೊಲೀಸ್ ಕಾನ್‌ಸ್ಟೆಬಲ್ (KSRP)

2,032

ಪೊಲೀಸ್ ಕಾನ್‌ಸ್ಟೆಬಲ್ (KSISF)

340

ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ಘಟಕಗಳು ಶೀಘ್ರದಲ್ಲೇ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದ್ದು, ಅಧಿಸೂಚನೆ ಪ್ರಕಟವಾದ ನಂತರ ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಅರ್ಹತೆ ವಿವರಗಳು ಪ್ರಕಟಗೊಳ್ಳಲಿವೆ.

ಅಧಿಕೃತ ಜಾಲತಾಣ: ksp.karnataka.gov.in

ಮಾಲತೇಶ್ ಮಾಳಮ್ಮನವರ್

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಕರ್ನಾಟಕಸಶಸ್ತ್ರಪೊಲೀಸ್‌ಕಾನ್‌ಸ್ಟೆಬಲ್#ಕರ್ನಾಟಕಪೊಲೀಸ್#ಕಾನ್‌ಸ್ಟೆಬಲ್‌ನೇಮಕಾತಿ#ಪೊಲೀಸ್‌ಹುದ್ದೆಗಳು#ಸಶಸ್ತ್ರಪೊಲೀಸ್#ಕಲ್ಯಾಣಕರ್ನಾಟಕ#ನೇಮಕಾತಿಸುದ್ದಿ#ಕರ್ನಾಟಕಸರ್ಕಾರಿಉದ್ಯೋಗ#ಕರ್ನಾಟಕನ್ಯೂಸ್#KSPrecruitment2025#KarnatakaPolice#PoliceConstableRecruitment#KarnatakaJobs#GovernmentJobs#PoliceVacancy#ConstableReallocation#PoliceDepartment#JobUpdate#Recruitment2025
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...