Udyogatana
ನೌಕರರ ಕಾರ್ನರ್

Govt Employees DA Hike- ಸರ್ಕಾರಿ ನೌಕರರಿಗೆ ಶೇ.2% ತುಟ್ಟಿಭತ್ಯೆ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಲಿದೆ ಡಿಎ?

ನಾಗರಾಜ್ ಯು ಎಂ., 4 Jan 2026, 10:58 am IST

ಸರ್ಕಾರಿ ನೌಕರರಿಗೆ ಶೇ.2ರಷ್ಟು ತುಟ್ಟುಭತ್ಯೆ ಹೆಚ್ಚಳವಾಗಲಿದ್ದು;ದೀ ಸಂಬAಧ ನಿಖರವಾದ ವರದಿಯೊಂದು ಬಿಡುಗಡೆಯಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ...

Govt Employees DA Hike- ಸರ್ಕಾರಿ ನೌಕರರಿಗೆ ಶೇ.2% ತುಟ್ಟಿಭತ್ಯೆ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಲಿದೆ ಡಿಎ?

Govt Employees DA Hike: ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಸಂತಸದ ಸುದ್ದಿ ಇದು. ದಿನೇದಿನೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ನೌಕರರಿಗೆ, ಕೇಂದ್ರ ಸರ್ಕಾರವು ಶೇ.2ರಷ್ಟು ತುಟ್ಟಿಭತ್ಯೆ (Dearness Allowance - DA) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳು ಹೊರಬಿದ್ದಿವೆ.

ಈ ವರದಿಯಂತೆ ಜಾರಿಯಾದರೆ, ದೇಶದ ಲಕ್ಷಾಂತರ ಕೇಂದ್ರ ನೌಕರರು ಮತ್ತು ನಿವೃತ್ತ ಪಿಂಚಣಿದಾರರಿಗೆ ಇದು ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿಯನ್ನು ನೀಡಲಿದೆ. ಸಂಬಳ ಹಾಗೀ ಪಿಂಚಣಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ.

ಡಿಎ ಹೆಚ್ಚಳಕ್ಕೆ ಕಾರಣವೇನು?

ತುಟ್ಟಿಭತ್ಯೆ ಹೆಚ್ಚಳವು ನೇರವಾಗಿ ದರ ವಿಳಾಸ ಸೂಚ್ಯಂಕದ ಮೇಲೆ ಅವಲಂಬಿತವಾಗಿರುತ್ತದೆ. ಲೇಬರ್ ಬ್ಯುರೊ ಬಿಡುಗಡೆ ಮಾಡುವ ಕನ್ಸೂಮರ್ ಪ್ರೈಸ್ ಇಂಡೆಕ್ಸ್ ಫಾರ್ ಇಂಡಸ್ಟ್ರಿಯಲ್ ವರ್ಕರ್ಸ್ (AICPI-IW) ಅಂಕಿಅAಶಗಳನ್ನು ಆಧಾರವಾಗಿ ತೆಗೆದುಕೊಂಡು ಡಿಎ ಲೆಕ್ಕ ಹಾಕಲಾಗುತ್ತದೆ.

ಲೇಬರ್ ಬ್ಯುರೊ ಪ್ರಕಟಿಸಿದ ಮಾಹಿತಿಯ ಪ್ರಕಾರ, 2025ರ ನವೆಂಬರ್ ತಿಂಗಳ AICPI-IW ಸೂಚ್ಯಂಕ 148.2ಕ್ಕೆ ಏರಿಕೆಯಾಗಿದೆ. ಇದು ಅಕ್ಟೋಬರ್ ತಿಂಗಳಿಗಿಂತ 0.5 ಪಾಯಿಂಟ್ ಹೆಚ್ಚಳವಾಗಿದೆ. ಈ ಸೂಚ್ಯಂಕ ಏರಿಕೆಯೇ ಕೇಂದ್ರ ನೌಕರರಿಗೆ ಡಿಎ ಹೆಚ್ಚಳದ ನಿರೀಕ್ಷೆಗೆ ಕಾರಣವಾಗಿದೆ.

ಜನವರಿಯಲ್ಲಿ ಘೋಷಣೆಯಾಗುವ ಡಿಎ ಎಷ್ಟು?

ಈಗಾಗಲೇ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಜನವರಿಯಲ್ಲಿ ಘೋಷಿಸಬೇಕಾದ ತುಟ್ಟಿಭತ್ಯೆ ಶೇ.59.94ರ ಮಟ್ಟ ತಲುಪಿದೆ. ಇನ್ನೂ 2025ರ ಡಿಸೆಂಬರ್ ತಿಂಗಳ ಸೂಚ್ಯಂಕ ಹೊರಬರಬೇಕಿದೆ.

ಅದರಲ್ಲಿ ಸ್ವಲ್ಪ ಏರಿಕೆಯಾದರೂ ಕಂಡುಬಂದರೆ ಡಿಎ ನೇರವಾಗಿ ಶೇ.60ಕ್ಕೆ ತಲುಪುವ ಸಾಧ್ಯತೆ ಇದೆ. ಅಂದರೆ, ಪ್ರಸ್ತುತ ಇರುವ ಶೇ.58ರ ತುಟ್ಟಿಭತ್ಯೆಯಿಂದ ಶೇ.2ರಷ್ಟು ಹೆಚ್ಚಳವಾಗುವ ಮೂಲಕ ಡಿಎ ಶೇ.60 ಆಗಲಿದೆ.

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.58ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ. ಹೊಸ ಡಿಎ ಹೆಚ್ಚಳವನ್ನು 2025ರ ಜುಲೈ 1ರಿಂದ ಅನ್ವಯವಾಗುವಂತೆ ಘೋಷಿಸುವ ನಿರೀಕ್ಷೆ ಇದೆ.

ಸಾಮಾನ್ಯವಾಗಿ ಡಿಎ ಘೋಷಣೆ ತಡವಾದರೂ, ಬಾಕಿ ಹಣವನ್ನು Arrears ರೂಪದಲ್ಲಿ ನೀಡಲಾಗುತ್ತದೆ.

7ನೇ ವೇತನ ಆಯೋಗದ ಕೊನೆಯ ಡಿಎ?

ಈ ಹೆಚ್ಚಳವು 7ನೇ ವೇತನ ಆಯೋಗದ ಶಿಫಾರಸುಗಳ ಅಡಿಯಲ್ಲಿ ನೀಡಲಾಗುವ ಕೊನೆಯ ತುಟ್ಟಿಭತ್ಯೆ ಹೆಚ್ಚಳವಾಗಬಹುದು ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ.

ಮುಂದಿನ ದಿನಗಳಲ್ಲಿ 8ನೇ ವೇತನ ಆಯೋಗ ರಚನೆಯಾದರೆ, ಡಿಎ ಲೆಕ್ಕಾಚಾರ ಮತ್ತು ವೇತನ ರಚನೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ನೌಕರರು ಮತ್ತು ಪಿಂಚಣಿದಾರರಿಗೆ ಇದರ ಮಹತ್ವ

ಅಗತ್ಯ ವಸ್ತುಗಳ ಬೆಲೆ, ಇಂಧನ ದರ, ಮನೆ ಬಾಡಿಗೆ, ಆರೋಗ್ಯ ವೆಚ್ಚಗಳು ದಿನೇದಿನೇ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶೇ.2ರಷ್ಟು ಡಿಎ ಹೆಚ್ಚಳವು ದೊಡ್ಡದಾಗಿ ಕಾಣಿಸದಿದ್ದರೂ, ತಿಂಗಳ ಸಂಬಳ ಮತ್ತು ಪಿಂಚಣಿಯಲ್ಲಿ ಸ್ಪಷ್ಟವಾದ ವ್ಯತ್ಯಾಸವನ್ನು ತರುತ್ತದೆ.

ಅಧಿಕೃತ ಘೋಷಣೆಗಾಗಿ ಇನ್ನೂ ಕೆಲವು ದಿನಗಳು ಕಾಯಬೇಕಿದ್ದರೂ, ಲೇಬರ್ ಬ್ಯುರೊದ ಅಂಕಿಅಂಶಗಳು ಡಿಎ ಶೇ.60ಕ್ಕೆ ಏರಿಕೆಯಾಗುವ ಸ್ಪಷ್ಟ ಸೂಚನೆ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರದ ಅಂತಿಮ ತೀರ್ಮಾನ ಮೇಲೆ ಎಲ್ಲರ ಗಮನ ನೆಟ್ಟಿದೆ.

ನಾಗರಾಜ್ ಯು ಎಂ.,

ಸುದ್ದಿ ವರದಿಗಾರ

ನಮ್ಮ ಸಮುದಾಯಕ್ಕೆ ಸೇರಿ

ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ

#ಕೇಂದ್ರ ನೌಕರರಿಗೆ ಡಿಎ ಹೆಚ್ಚಳ#ತುಟ್ಟಿಭತ್ಯೆ ಶೇ.2 ಹೆಚ್ಚಳ#ಕೇಂದ್ರ ಸರ್ಕಾರಿ ನೌಕರರ ಸುದ್ದಿ#ಪಿಂಚಣಿದಾರರಿಗೆ ಡಿಎ#7ನೇ ವೇತನ ಆಯೋಗ ಡಿಎ#Central Govt DA Hike#2 Percent DA Increase#Dearness Allowance News#Central Govt Employees#7th Pay Commission DA
ಹೆಚ್ಚಿನದನ್ನು ಲೋಡ್ ಮಾಡಲಾಗುತ್ತಿದೆ...