ಸಿಎ ಪರೀಕ್ಷಾ ಫಲಿತಾಂಶ ಪ್ರಕಟ | ಸಂಪೂರ್ಣ ಮಾಹಿತಿ ಇಲ್ಲಿದೆ...
ಭಾರತದ ಅತ್ಯಂತ ಕಠಿಣ ವೃತ್ತಿಪರ ಪರೀಕ್ಷೆಗಳಲ್ಲಿ ಒಂದಾದ ಚಾರ್ಟರ್ಡ್ ಅಕೌಂಟೆAಟ್ (ಸಿಎ) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ...

CA Exam Results 2025: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವು (Institute of Chartered Accountants of India- ICAI) ಕಳೆದ ಸೆಪ್ಟೆಂಬರ್‌ನಲ್ಲಿ ನಡೆಸಲಾಗಿದ್ದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಫೌಂಡೇಶನ್, ಇಂಟರ್ ಮೀಡಿಯೇಟ್ ಹಾಗೂ ಫೈನಲ್ ಪರೀಕ್ಷೆಗಳ ಫಲಿತಾಂಶವನ್ನು ನಿನ್ನೆ ನವೆಂಬರ್ 3ರ ಸೋಮವಾರ ಪ್ರಕಟಿಸಿದೆ.
ಸಿಎ ಫೈನಲ್‌ನಲ್ಲಿ ಮಧ್ಯಪ್ರದೇಶದ ಧಾಮ್ಮೋಡ್‌ನ ಮುಕುಂದ್ ಅಗಿವಾಲ್ ಶೇ.83.33ರಷ್ಟು ಅಂಕ ಗಳಿಸುವ ಮೂಲಕ ದೇಶಕ್ಕೆ ಅಗ್ರಸ್ಥಾನ ಪಡೆದಿದ್ದಾರೆ. ನಂತರದಲ್ಲಿ ಹೈದರಾಬಾದ್‌ನ ತೇಜಸ್ ಮುಂಡಾಡ ಶೇ.82ರಷ್ಟು, ರಾಜಸ್ಥಾನದ ಅಲ್ವಾರ್‌ನ ಬಕುಲ್ ಗುಪ್ತಾ ಶೇ.81.5ರಷ್ಟು ಅಂಕ ಗಳಿಸುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.
ಫೌಂಡೇಶನ್ ಮತ್ತು ಇಂಟರ್ ಮೀಡಿಯೇಟ್ ಫಲಿತಾಂಶ
ಸಿಎ ಫೌಂಡೇಷನ್ ಪರೀಕ್ಷೆಗೆ 98,827 ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 14,609 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ.14.78 ಫಲಿತಾಂಶ ಬಂದಿದೆ.
ಇಂಟರ್ ಮಿಡಿಯೇಟ್ ಗ್ರೂಪ್‌ನ ಪರೀಕ್ಷೆಗೆ 1.59 ಅಭ್ಯರ್ಥಿಗಳು ಪ್ರವೇಶಪತ್ರಗಳನ್ನು ಪಡೆದುಕೊಂಡಿದ್ದರು. 93,074 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8,780 ಜನರು ಉತ್ತೀರ್ಣರಾಗಿ ಶೇ.9.43 ಫಲಿತಾಂಶ ದಾಖಲಾಗಿದೆ.
ಗ್ರೂಪ್ 2ರಲ್ಲಿ 69,768 ಜನರು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 18,938 ಅಭ್ಯರ್ಥಿಗಳು ಫೈನಲ್ಸ್'ಗೆ ಅರ್ಹತೆ ಪಡೆದು ಶೇ.27.14 ಉತ್ತೀರ್ಣ ಪ್ರಮಾಣವಾಗಿದೆ.
ಎರಡೂ ಗ್ರೂಪ್‌ಗಳ ಪರೀಕ್ಷೆಗೆ ಹಾಜರಾಗಿದ್ದ 36,398 ವಿದ್ಯಾರ್ಥಿಗಳಲ್ಲಿ ಕೇವಲ 3,663 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.10.06 ಫಲಿತಾಂಶ ಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಸಿಎ ಅಂತಿಮ ಗ್ರೂಪ್ 1ರ ಪರೀಕ್ಷೆ ಫಲಿತಾಂಶ
ಇನ್ನು ಸಿಎ ಅಂತಿಮ ಗ್ರೂಪ್ 1ರ ಪರೀಕ್ಷೆಯಲ್ಲಿ 51,955 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ 12,811 ಜನರು ಉತ್ತೀರ್ಣರಾಗಿದ್ದಾರೆ. ಶೇ.24.66 ರಿಸಲ್ಟ್ ಬಂದಿದೆ.
ಗ್ರೂಪ್ ಎರಡರಲ್ಲಿ 32,273 ಅಭ್ಯರ್ಥಿಗಳು ಪರೀಕ್ಷೆ ಬರೆದು 8,151 ಜನರು ಸಿಎ ಅರ್ಹತೆ ಗಳಿಸಿದ್ದಾರೆ. ಎರಡೂ ಗ್ರೂಪ್ ಗಳಿಗೆ ಹಾಜರಾಗಿದ್ದ 16,800 ಜನರಲ್ಲಿ 2,727 ಜನರು ಮಾತ್ರ ಸಿಎ ಎನಿಸಿಕೊಂಡಿದ್ದಾರೆ. ಶೇ.16.23 ಫಲಿತಾಂಶ ಬಂದಿದೆ.
ಸವಿತಾ ಎಂ.,
ಸುದ್ದಿ ವರದಿಗಾರ
ನಮ್ಮ ಸಮುದಾಯಕ್ಕೆ ಸೇರಿ
ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ
